ಮಡಿಕೇರಿ, ನ. 20: 2025-26ನೇ ಸಾಲಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ವೇಗಗೊಳಿಸುವ (ಆರ್‍ಎಎಂಪಿ) ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಉದ್ಯಮ ನೋಂದಣಿ ಪಡೆದಿರುವ ನೋಂದಾಯಿತ ಉದ್ಯಮಿಗಳಿಗೆ ಟ್ರೇಡ್ ರಿಸಿವೇಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (ಟಿಆರ್‍ಎಡಿಎಸ್) (ಟ್ರೇಡ್ಸ್ ಎಂದರೆ ವ್ಯಾಪಾರ ಹಣ ರಿಯಾಯಿತಿ ವ್ಯವಸ್ಥೆ) ಆನ್‍ಲೈನ್ ಪ್ಲಾಟ್‍ಫಾರ್ಮ್‍ಗೆ ಸಂಬಂಧಿಸಿದಂತೆ ತಾ. 24 ರಂದು ಬೆಳಿಗ್ಗೆ 10 ಗಂಟೆಯಿಂದ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ನಗರದ ರೆಡ್‍ಬ್ರಿಕ್ಸ್ ಇನ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ (ಪಾಕಶಾಲಾ ಹೊಟೇಲ್ ಮೇಲ್ಭಾಗ) ಏರ್ಪಡಿಸಲು ಉದ್ದೇಶಿಸಿದ್ದು, ಜಂಟಿ ನಿರ್ದೇಶಕರ ಕಚೇರಿ ಕೊಹಿನೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲಾ ಕಚೇರಿಯಲ್ಲಿ ತಾ. 24 ರೊಳಗೆ ನೋಂದಾಯಿಸಿಕೊಳ್ಳಲು ಕೋರಿದೆ. ನೋಂದಣಿ ಮಾಡಿಸಲು ಆಧಾರ್ ಕಾರ್ಡ್, ಉದ್ಯಮ್ ರಿಜಿಸ್ಟ್ರೇಷನ್ ಪ್ರತಿಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ 08272-228746/9845596252 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.