ವೀರಾಜಪೇಟೆ, ನ 20: ವೀರಾಜಪೇಟೆ ನಗರದ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ಮಾಸದ ಕೊನೆಯ ಸೋಮವಾರ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿ ದೀಪ ಬೆಳಗಿಸಲಾಯಿತು.

ಸಂಜೆ ಶ್ರೀ ಬಸವೇಶ್ವರ ದೇವರಿಗೆ ದೀಪಾಲಂಕಾರ, ವಿಶೇಷ ಪೂಜೆ, ಮಹಾಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಬಳಿಕ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಕಾರ್ತಿಕ ಮಾಸದ ಕೊನೆಯ ಸೋಮವಾರದ ಪೂಜಾ ಕಾರ್ಯದಲ್ಲಿ ಮಡಿಕೇರಿ ವಕೀಲ ಎಂ.ಬಿ. ನಾಗರಾಜು, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರು, ವಕೀಲ ರವೀಂದ್ರನಾಥ್ ಕಾಮತ್, ಉಪಾಧ್ಯಕ್ಷ ಜೆ.ಎನ್. ಪುಷ್ಪರಾಜ್ ಹಾಗೂ ಸಮಿತಿ ಸದಸ್ಯರಾದ ಕೆ.ಜಿ. ಅರುಣ್ ಕುಮಾರ್, ಬಿ.ಎಂ. ಪುರುಶೋತ್ತಮ, ವಕೀಲರಾದ ಅಂಬಿ ಕೃಷ್ಣ ಮೂರ್ತಿ, ನರೇಂದ್ರ ಕಾಮತ್, ಚಂದ್ರ ಪ್ರಸಾದ್, ನಿಕ್ಷೇಪ್, ಕುಪ್ಪಂಡ ರಾಜೀವ್, ಮಾಳೇಟಿರ ಸಾಬಾ ಸೇರಿದಂತೆ ಆಡಳಿತ ಮಂಡಳಿಯವರು ಇದ್ದರು. ಪೂಜಾ ಕಾರ್ಯದಲ್ಲಿ ಪಟ್ಟಣ ಸೇರಿದಂತೆ ಇತರೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.