ಸಿದ್ದಾಪುರ, ನ. 20: ಆಟೋವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗ ಗಂಭೀರ ಗಾಯಗೊಂಡಿರುವ ಘಟನೆ ಪಾಲಿಬೆಟ್ಟ ಸಮೀಪದ ಗದ್ದೆಮನೆ ಬಳಿ ನಡೆದಿದೆ. ಪಾಲಿಬೆಟ್ಟ ಟಾಟಾ ಸಂಸ್ಥೆಯ ಹೋಪ್ ಡಿವಿಜನ್ ತೋಟದ ಲೈನ್ಮನೆಯಲ್ಲಿ ವಾಸವಿರುವ ಹಾಗೂ ಸಂಸ್ಥೆಯ ಕಚೇರಿಯ ಸ್ಟೋರ್ನಲ್ಲಿ ಕೆಲಸ ಮಾಡಿಕೊಂಡಿರುವ ಅರುಣ ಎನ್ .ಆರ್. (30)ಎಂಬವರು ತಮ್ಮ ಪುತ್ರ ವಿಹಾನ್ (8) ನೊಂದಿಗೆ ಕೆಲಸದ ನಿಮಿತ್ತ ಗೋಣಿಕೊಪ್ಪಲುವಿಗೆ ಸ್ಕೂಟಿಯಲ್ಲಿ ತೆರಳಿ ಹಿಂತಿರುಗಿ ಪಾಲಿಬೆಟ್ಟಕ್ಕೆ ಬರುತ್ತಿದ್ದಾಗ ಪಾಲಿಬೆಟ್ಟ ಸಮೀಪದ ಗದ್ದೆಮನೆ ಸ್ಮಶಾನದ ಬಳಿ ಅತಿವೇಗದಿಂದ ಬಂದ ಆಟೋರಿಕ್ಷಾ (ಕೆ.ಎ.12-ಎ9506) ಸ್ಕೂಟಿಗೆ ಡಿಕ್ಕಿಯಾಗಿದೆ.
ಪರಿಣಾಮ ಸ್ಕೂಟಿ (ಕೆ.ಎ.12ಯು.5541) ಸವಾರ ಅರುಣ ರಸ್ತೆಯ ಮಧ್ಯಕ್ಕೆ ಬಿದ್ದು ಸ್ಕೂಟಿ ಅರುಣ ಅವರ ಮೇಲೆ ಬಿದ್ದ ಪರಿಣಾಮ ಅರುಣನವರ ತಲೆಗೆ ಎಡ ಕೈ ಬಲತೊಡೆಗೆ ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದೆ. ಸ್ಕೂಟಿಯ ಹಿಂಭಾಗದಲ್ಲಿ ಕುಳಿತಿದ್ದ ಅರುಣ ಅವರ ಮಗ ವಿಹಾನ್ನ ಬಲ ಕಾಲಿಗೆ ಗಂಭೀರ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡ ತಂದೆ ಹಾಗೂ ಮಗನನ್ನು ಸ್ಥಳೀಯರು ಕೂಡಲೇ ಗೋಣಿಕೊಪ್ಪಲಿನ ಸರಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳು ಅರುಣ ಅವರ ಪತ್ನಿ ಶಿಲ್ಪ ಕೆ.ಎಂ. ಅವರು ಆಟೋ ಚಾಲಕ ಕೈಕೇರಿಯ ಎನ್.ಕೆ. ಭೀಮಯ್ಯ ವಿರುದ್ಧ ದೂರು ನೀಡಿದ್ದು ಸಿದ್ಧಾಪುರ ಪೆÇಲೀಸರು ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.