ಮಡಿಕೇರಿ, ನ. 20: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಮೈಸೂರು ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಜಿಲ್ಲೆಯ ಮಡಿಕೇರಿ ತಾಲೂಕಿಗೆ ಮಾತ್ರ 99 (ಪರಿಶಿಷ್ಟ ಜಾತಿ-ಶೇ. 17, ಪರಿಶಿಷ್ಟ ಪಂಗಡ ಶೇ. 7, ಹಿಂದುಳಿದ ವರ್ಗ-ಶೇ. 32, ಸಾಮಾನ್ಯ -ಶೇ. 44) ಗುರಿ ನಿಗದಿಯಾಗಿದ್ದು ಮೀಸಲಾತಿ ಅನ್ವಯ ಆಯ್ಕೆಯಾಗುವ ಪ್ರತಿ ಫಲಾನುಭವಿಗಳಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು.
ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ 9449083876, ಇವರನ್ನು ಸಂಪರ್ಕಿಸುವಂತೆ ಕೋರಿದೆ. ಅರ್ಜಿಗಳನ್ನು ಭರ್ತಿಮಾಡಿ ಡಿಸೆಂಬರ್ 4 ರೊಳಗೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ ತಿಳಿಸಿದ್ದಾರೆ.