ವೀರಾಜಪೇಟೆ, ನ. ೨೦: ರಾಣಿ ಅಬ್ಬಕ್ಕ ದೇವಿಯು ವೀರತ್ವಕ್ಕೆ ಸ್ಫೂರ್ತಿಯಾಗಿದ್ದಾಳೆ ಎಂದು ಸಾಮಾಜಿಕ ಕಾರ್ಯಕರ್ತರಾದ ಕುಟ್ಟಂಡ ಪ್ರಿನ್ಸ್ ಗಣಪತಿ ಅಭಿಪ್ರಾಯಪಟ್ಟರು.

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಸಂಘ ಮಂಗಳೂರು, ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಅಬ್ಬಕ್ಕ @೫೦೦ ಪ್ರೇರಣದಾಯಿ ಉಪನ್ಯಾಸಗಳ ಸರಣಿ ಎಸಳು ೮೯’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಭಾರತದ ಮೊದಲ ಸ್ವಾತಂತ್ರö್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆನರಾ ಇಂಜಿನಿಯರಿAಗ್ ಕಾಲೇಜಿನ ಡೀನ್ ಮತ್ತು ಪ್ರಾಧ್ಯಾಪಕರಾದ ಪ್ರೊ. ಉದಯ ಕುಮಾರ್ ಶೆಣೈ ಮಾತನಾಡಿ, ತನ್ನದೇಯಾದ ವೈಶಿಷ್ಟ÷್ಯವಾದ ಸಂಸ್ಕöÈತಿಯನ್ನು ತುಳುನಾಡು ಹೊಂದಿದೆ. ಮಹಿಳೆಯರು ಕೂಡ ದಕ್ಷವಾಗಿ ಆಡಳಿತ ನಡೆಸಬಹುದು ಎಂದು ಜಗತ್ತಿಗೆ ಸಾರಿದ ನಾಡು ತುಳುನಾಡು. ತುಳು ನಾಡಿನಲ್ಲಿ ಆಳ್ವಿಕೆಯನ್ನು ಮಾಡಿ ರಾಷ್ಟç ರಕ್ಷಣೆಗಾಗಿ ಖಡ್ಗವನ್ನು ಹಿಡಿದು ೧೫೫೪ ರಿಂದ ೧೫೮೮ ರ ವರೆಗೆ ಆಳ್ವಿಕೆ ಮಾಡಿದ ರಾಣಿ ಅಬ್ಬಕ್ಕ ಮಹಿಳೆಯರಿಗೆ ಆದರ್ಶವಾಗಿದ್ದಾಳೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸರಸ್ವತಿ ಮಾತನಾಡಿ, ವಿದ್ಯಾರ್ಥಿಗಳು ವೀರ ಮಹಿಳೆಯರ ಸಾಹಸಗಾಥೆಗಳನ್ನು ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಮಾಧವ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜು. ಕೆ., ಕನ್ನಡ ಉಪನ್ಯಾಸಕರಾದ ಡಾ. ಪ್ರಭು, ಕೆ.ಆರ್.ಎಂ.ಎಸ್.ಎಸ್. ಸಂಯೋಜಕಿ ಜಯಲಕ್ಷಿ÷್ಮ ಆರ್. ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಅತಿಥಿಗಳೊಡನೆ ಸಂವಾದವನ್ನು ನಡೆಸಿದರು.