ವೀರಾಜಪೇಟೆ, ನ. ೧೯: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಪ್ಪುನಾಡು ಮೈತಾಡಿ ನಾಂಗಾಲಕೇರಿಯಲ್ಲಿ ಪ್ರಥಮ ವರ್ಷದ ಮುಕ್ತ ತೋಕ್‌ನಮ್ಮೆ ಪೈಪೋಟಿಯನ್ನು ತಾ.೨೩ ರಂದು ಕಾಕೋಟುಪರಂಬು ಶಾಲಾ ಮೈದಾನದಲ್ಲಿ ಪೂರ್ವಾಹ್ನ ೧೦ ಗಂಟೆಗೆ ನಡೆಸಲಾಗುವುದು ಎಂದು ಮೈತಾಡಿ ನಾಂಗಾಲಕೇರಿ ತಕ್ಕ ಮುಖ್ಯಸ್ಥರಾದ ಬಾಳೆಕುಟ್ಟಿರ ಗಣು ಕಾವೇರಪ್ಪ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ ತೋಕ್‌ನಮ್ಮೆಯನ್ನು ವೀರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿರುವ ಮಲ್ಲಮಟ್ಟಿ ಸೀತಾ ಎನ್‌ಕ್ಲೆöÊವ್‌ನಲ್ಲಿ ನಡೆಸಲು ಉದ್ದೇಶಿ ಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಗುವುದು. ಬೆಪ್ಪುನಾಡಿಗೆ ಅಡಗಿರುವ ನಾಂಗಾಲಕೇರಿಯಲ್ಲಿ ೭ ಕುಟುಂಬಗಳಿದ್ದು, ೩೦೦ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಪ್ರಥಮ ಬಾರಿಗೆ ತೋಕ್‌ನಮ್ಮೆಯನ್ನು ೪ಆರನೇ ಪುಟಕ್ಕೆ (ಮೊದಲ ಪುಟದಿಂದ) ನಡೆಸಲು ನಿರ್ಧರಿಸಲಾಗಿದೆ. .೨೨ ರೈಫಲ್, ೧೨ ಬೋರ್ ಹಾಗೂ ಏರ್ ರೈಫಲ್ ಎಂಬ ಮೂರು ವಿಭಾಗದಲ್ಲಿ ನಡೆಸಲಾಗುವುದು. ಈ ತೋಕ್‌ನಮ್ಮೆಯಲ್ಲಿ ಯಾವುದೇ ಜಾತಿ, ಮತ, ಭೇದ, ಪಂಕ್ತಿ ಇರುವುದಿಲ್ಲ. ಲಿಂಗ ಭೇದ ಇಲ್ಲದೆ ಮುಕ್ತವಾಗಿ ಭಾಗವಹಿಸಬಹುದು ಎಂದು ಹೇಳಿದರು.

ನಾಂಗಾಲಕೇರಿ ಅಧ್ಯಕ್ಷ ಅಯ್ಯಮಂಡ ವೇಣು ಮಾತನಾಡಿ ತೋಕ್‌ನಮ್ಮೆಯಲ್ಲಿ ಭಾಗವಹಿಸುವ ಮೂರು ವಿಭಾಗಗಳ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಬೇರೆರ ಮಿಥುನ್ ಬೆಳ್ಯಪ್ಪ (೯೮೪೫೯೧೩೪೫೨) ಅವರನ್ನು ಸಂಪರ್ಕಿಸಬಹುದಾಗಿದೆ. ವೀರಾಜಪೇಟೆ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರ‍್ಯಾಲಿ ಪಟು ಬಲ್ಲಚಂಡ ಡೆನ್ ತಿಮ್ಮಯ್ಯ, ಸಮಾಜ ಸೇವಕರಾದ ಕಾಣತಂಡ ಬೀನಾ ಜಗದೀಶ್, ಬೆಂಗಳೂರು ಕೊಡವಸಮಾಜ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ, ಚೀಫ್ ಎಲೆಕ್ಟಿçಕಲ್ ಆಫಿಸರ್ ತೀತಿರ ರೋಷನ್ ಅಪ್ಪಚ್ಚು, ಉದ್ಯಮಿ ವಿಜಯ್‌ಕುಮಾರ್ ಉಪಸ್ಥಿತರಿರುವರು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸದಸ್ಯರುಗಳಾದ ಅಯ್ಯಮಂಡ ಪ್ರವೀಣ್ ಭೀಮಯ್ಯ, ಬಾಳೆಕುಟ್ಟಿರ ದೊರೆ, ಅಮ್ಮಂಡ ಸುಮನ್ ತಿಮ್ಮಯ್ಯ, ಉಪಸ್ಥಿತರಿದ್ದರು.