ಮಡಿಕೇರಿ, ನ. ೧೯: ಮಡಿಕೇರಿಯ ಸಂತ ಮೈಕಲರ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ “ಸಮಾಗಮ” ತಾ.೨೨ ರಂದು ನಡೆಯಲಿದೆ.

ಅಂದು ಸಂಜೆ ೪ ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಮೈಸೂರು ಬಿಷಪ್ ಮತ್ತು ಎಂಡಿಇಎಸ್ ಅಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ಮೈಸೂರು ಡಯಾಸಿಸ್ ವಿಕಾರ್ ಜನರಲ್ ಆಲ್ಫೆçಡ್ ಜಾನ್ ಮೆಂಡೋನ್ಸಾ, ಎಂಡಿಇಎಸ್ ಕಾರ್ಯದರ್ಶಿ ಫಾ. ಎಡ್ವರ್ಡ್ ವಿಲಿಯಂ ಸಲ್ಡಾನಾ, ಖಜಾಂಚಿ ಫಾ. ನವೀನ್ ಕುಮಾರ್ ಎ, ಮಡಿಕೇರಿ ಸೇಂಟ್ ಮೈಕೆಲ್ಸ್ ಚರ್ಚ್ನ ಫಾ. ಜಾರ್ಜ್ ದೀಪಕ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.