ಮಡಿಕೇರಿ, ನ. ೧೯: ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಆದರೆ ಇಂದು ಜನಗಣತಿಯೂ ಸೇರಿದಂತೆ ರಾಜ್ಯದ ದಾಖಲೆಗಳ ಎಲ್ಲಾ ಕಾಲಂಗಳು ಈ ದೇಶದ ಬಹುಧರ್ಮ, ಪ್ರಬಲಧರ್ಮ ಮತ್ತು ಬಲಾಢ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲ್ಪಟ್ಟಿದೆ. ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಕೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.

ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ೨೦೨೬-೨೭ರಲ್ಲಿ ನಡೆಯಲಿರುವ ೧೬ನೇ ರಾಷ್ಟಿçÃಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಕುಟ್ಟದಲ್ಲಿ ನಡೆದ ೨೦ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಕೊಡವರ ಸಬಲೀಕರಣಕ್ಕೆ ಪೂರಕವಾಗಿರುವ ಸಂವಿಧಾನಬದ್ಧವಾದ ಹಲವು ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದರು.

ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷö್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿAದ ಮಾತ್ರ ಸಾಧ್ಯ ಎಂದು ವಿವರಿಸಿದರು.

೨೦೨೬-೨೭ ರಲ್ಲಿ ನಡೆಯಲಿರುವ ೧೬ನೇ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೊಡವರು ರಾಷ್ಟ್ರೀಯ ಜನಗಣತಿಯ ಸಂದರ್ಭ ಸ್ವತಂತ್ರ‍್ಯವಾಗಿ ‘ಕೊಡವ’ ಎಂದು ಗುರುತಿಸಿಕೊಳ್ಳುವಂತೆ ಸಿಎನ್‌ಸಿ ಕರೆ ನೀಡಿದೆ. ಆದರೆ ಈ ಕರೆಗೆ ವಿರುದ್ಧವಾಗಿ ಕೆಲವು ಪಟ್ಟಭದ್ರಹಿತಾಸಕ್ತಿಗಳು ಈ ರೀತಿ ಪ್ರತ್ಯೇಕವಾಗಿ ಗುರುತಿಸಿಕೊಂಡರೆ ಕೊಡವರಿಗೆ ರಕ್ಷಣೆ ಇರುವುದಿಲ್ಲ ಎಂದು ಅಪಪ್ರಚಾರ ಮಾಡುವ ಮೂಲಕ ಕೊಡವರ ಹಾದಿ ತಪ್ಪಿಸುತ್ತಿದ್ದಾರೆ. ಕೊಡವರನ್ನು ನಿರಂತರವಾಗಿ ವಂಚಿಸುತ್ತಿರುವ ಕೆಲವು ಕೂಟಗಳ ಬಗ್ಗೆ ಕೊಡವರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.

ತಾ.೩೦ರಂದು ಪಾಲಿಬೆಟ್ಟದಲ್ಲಿ ಜನಜಾಗೃತಿ

೨೧ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ತಾ.೩೦ ರಂದು ಪಾಲಿಬೆಟ್ಟದಲ್ಲಿ ಮತ್ತು ೨೨ನೇ ಕಾರ್ಯಕ್ರಮ ಡಿ.೧೫ ರಂದು ತಿತಿಮತಿಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವೀರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬಿಟ್ಟಂಗಾಲ ಮತ್ತು ಹುದಿಕೇರಿಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಚ್ಚಮಾಡ ಪ್ರಕಾಶ್, ತೀತಿರ ರಘು, ಅಜ್ಜಿಕುಟ್ಟೀರ ಲೋಕೇಶ್, ಕಳ್ಳಿಚಂಡ ದಿಲೀಪ್, ಬಾಚರಣಿಯಂಡ ಚಿಪ್ಪಣ, ಮಾಚಿಮಾಡ ರಾಜು ಅಯ್ಯಣ್ಣ, ಮತ್ರಂಡ ನರೇಂದ್ರ, ಚೋಡುಮಾಡ ಸುಬ್ಬಯ್ಯ, ಕೊಂಗAಡ ಸುರೇಶ್ ದೇವಯ್ಯ, ಅಜ್ಜಮಾಡ ಹರೀಶ್, ಎಂ.ಎನ್.ತಿಮ್ಮಯ್ಯ, ಮಚ್ಚಮಾಡ ಕಾರ್ಯಪ್ಪ, ಕೊಟ್ಟಂಗಡ ಶಶಿ, ತೀತಿರ ತಿಮ್ಮಯ್ಯ, ತಾತೀರ ವಾಸು, ಚೋಡುಮಾಡ ರಾಜ, ತೀತಿರ ಮಣಿ, ಮೀದೇರಿರ ತಿಮ್ಮಯ್ಯ, ಕಿರಿಯಮಾಡ ಶೆರಿನ್ ಕೊಡವ, ಮುಕ್ಕಾಟೀರ ದೀಪಕ್, ಚೋಡುಮಾಡ ಅಯ್ಯಪ್ಪ, ತೀತೀರ ರವಿ, ಕಳ್ಳಂಗಡ ಮದನ್, ತಡಿಯಂಗಡ ಜಯರಾಜ್, ತಡಿಯಂಗಡ ಬಾಬು ಶಂಕರ್, ಅಪ್ಪಂಡೇರAಡ ನಂದಾ, ಪೆಮ್ಮಣಮಾಡ ಡಾಲಿ, ಗುಡಿಯಂಗಡ ಮುತ್ತು, ಮುಕ್ಕಾಟಿರ ನವೀನ್, ಅಪ್ಪಂಡೇರAಡ ಉತ್ತಪ್ಪ, ಕೊಟ್ರಂಗಡ ಚೆಂಗಪ್ಪ, ಗಾಣಂಗಡ ಬೋಪಯ್ಯ, ಹೊಟ್ಟೆಂಗಡ ಪ್ರಜ್ವಲ್, ಮುಕ್ಕಾಟಿರ ಸುಬ್ರಮಣಿ, ಬೊಟ್ಟಂಗಡ ಗಿರೀಶ್, ತೀತಿರ ದೇವಯ್ಯ, ಅಜ್ಜಿಕುಟ್ಟಿರ ದಿನೇಶ್, ಗುಡಿಯಂಗಡ ಚೆಂಗಪ್ಪ, ನೆಲ್ಲಿರ ದೇವಯ್ಯ, ಕೊಟ್ರಮಾಡ ಕಾರ್ಯಪ್ಪ, ಚಟ್ಟಮಾಡ ಅನಿಲ್, ಕೊಟ್ಟಂಗಡ ರಾಮು, ಕಾಳಮಾಡ ಬೋಸು, ಕಳ್ಳಿಚಂಡ ಸುಬ್ರಮಣಿ, ಮಾಚಿಮಾಡ ಅಪ್ಪಯ್ಯ, ಕಳ್ಳಿಚಂಡ ಬಿ.ಎಸ್. ಸುಬ್ರಮಣಿ, ಕೈಬುಲಿರ ಸುಜನ್ ಬೋಪಣ್ಣ, ನಾಳಿಯಂಡ ಧರ್ಮಜ, ಕೈಪಳೇರ ಬೋಪಯ್ಯ, ಕೊಟ್ರಂಗಡ ಅಪ್ಪಣ್ಣ, ಕಳ್ಳಂಗಡ ರವಿ ಮಾಚಯ್ಯ, ಹೊಟ್ಟೆಂಗಡ ತಿಮ್ಮಯ್ಯ, ಬೊಜ್ಜಂಗಡ ಕಟ್ಟಿ, ಚೇಮಿರ ಗಿರೀಶ್, ಮಾಪಣಮಾಡ ಕಿರಣ್, ಮಾದಪಂಡ ತಿಮ್ಮಯ್ಯ, ಮಲ್ಲಪನೆರ ಚಾಮಿ ಹಾಗೂ ಕೊಟ್ರಂಗಡ ಪ್ರಭು ಪಾಲ್ಗೊಂಡು ಸಿಎನ್‌ಸಿ ಹೋರಾಟದ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.