ವೀರಾಜಪೇಟೆ, ನ. ೧೯: ವೀರಾಜಪೇಟೆ ಪುರಸಭೆಯ ನೂತನ ಆಡಳಿತಾಧಿಕಾರಿಯಾಗಿ ನಿತಿನ್ ಚಕ್ಕಿ ಅಧಿಕಾರ ಸ್ವೀಕಾರ ಮಾಡಿದರು. ಪುರಸಭೆ ಕಛೇರಿಗೆ ಆಗಮಿಸಿದ ಆಡಳಿತಾಧಿಕಾರಿಗಳನ್ನು ಹೂ ಗುಚ್ಚ ನೀಡಿ ಮುಖ್ಯಾಧಿಕಾರಿ ನಾಚಪ್ಪ ಬರಮಾಡಿಕೊಂಡರು.
ಬಳಿಕ ಕಚೇರಿ ಸಿಬ್ಬಂದಿಗಳೊAದಿಗೆ ಸಭೆ ನಡೆಸಿದರು. ಸಿಬ್ಬಂದಿಗಳ ಮಾಹಿತಿ ಪಡೆದ ಅಧಿಕಾರಿಗಳು ಅವರ ಕಾರ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು, ಪ್ರಗತಿಯಲ್ಲಿರುವ ಕಾಮಗಾರಿಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಕಳೆದ ಮೂರು ವರ್ಷಗಳ ಹಿಂದಿನಿAದ ಸರಕಾರದಿಂದ ಬಿಡುಗಡೆಯಾದ ಹಣದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸರಕಾರದ ಕೆಲಸ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದAತೆ ಮಾಡಬೇಕು ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ, ದಿನ ಕೂಲಿ ಕಾರ್ಮಿಕರಿಗೆ ಸಂಬಳ ನೀಡಲು ತಕ್ಷಣ ಕ್ರಮವನ್ನು ಕೈಗೊಳ್ಳುತ್ತೇವೆ. ವಾರ್ಡ್ ವಿಂಗಡಣೆ ಬಗ್ಗೆ ಅಸಮಾಧಾನ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಭೆ ಕರೆದು ಕ್ರಮವನ್ನು ಅನುಸರಿಸುತ್ತೇವೆ ಎಂದು ನಿತಿನ್ ಚಕ್ಕಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ, ಪರಿಸರ ಅಭಿಯಂತರ ರೀತುಸಿಂಗ್, ವ್ಯವಸ್ಥಾಪಕರಾದ ಸುಜಾತ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು.