ಮಡಿಕೇರಿ, ನ. ೧೯ : ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಭಾರತರತ್ನ ಇಂದಿರಾಗಾAಧಿ ಅವರ ೧೦೮ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಮತ್ತು ಮಹಿಳಾ ಪದಾಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ನAತರ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಇಂದಿರಾ ಅವರ ಸಾಧನೆ ಕುರಿತು ವಿವರಿಸಿದರು.

ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ನಗರಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ, ಪ್ರಮುಖರಾದ ಕೆ.ಜೆ. ಪೀಟರ್, ನಗರಸಭೆ ಸದಸ್ಯ ಮುದ್ದುರಾಜ್, ಮೀನಾಜ್ ಪ್ರವೀಣ್, ಮುನೀರ್ ಮಾಚರ್, ಶಶಿಕಲಾ, ರಾಜೇಶ್ವರಿ, ತುಳಸಿ ಗಾಂಧಿ ಪ್ರಸಾದ್, ಲೀಲಾ ಶೇಷಮ್ಮ, ಉದಯ ಚಂದ್ರಿಕಾ, ಅಮೀನಾ, ಬಿಂದು, ವಿಮಲ, ಗಿರಿಜಮ್ಮ, ದಿವ್ಯ ಪೆರುಮಂಡ, ಮಮ್ತಾಜ್ ಬೇಗಂ, ಹೇಮಾವತಿ, ಪ್ರೇಮಾ ಕೃಷ್ಣಪ್ಪ, ಹೆಚ್.ಕೆ. ಪ್ರೇಮ, ಚಂದ್ರವತಿ, ಶಾರದಾ, ಸದಾನಂದ ಬಂಗೇರ, ರಾಜು, ರಿಯಾಜುದ್ದೀನ್, ನಜೀರ್, ಗಿರಿಜ, ರಾಣಿ, ಉಷಾ ಮತ್ತಿತರರು ಉಪಸ್ಥಿತರಿದ್ದರು ಸೋಮವಾರಪೇಟೆ : ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಬಳಗ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತ್ಯೇಕವಾಗಿ ಆಚರಿಸಲಾಯಿತು.

ಇಂದಿರಾ ಗಾಂಧಿ ಅಭಿಮಾನಿಗಳ ಸಂಘದಿAದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಅವರು, ಇಂದಿರಾಗಾAಧಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಇಂದಿರಾಗಾAಧಿ ಅಭಿಮಾನಿಗಳ ಸಂಘದಿAದ ಪ್ರತಿ ವರ್ಷ ಅವರ ಹುಟ್ಟುಹಬ್ಬ ಹಾಗೂ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ರಾಜ್ಯಮಟ್ಟದ ಕಬಡ್ಡಿ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ ಎಂದರು.

ಇAದಿರಾಗಾAಧಿ ಅವರು ದೇಶ ಕಂಡ ಅಪ್ರತಿಮ ನಾಯಕರಲ್ಲಿ ಓರ್ವರು. ಸ್ವಾತಂತ್ರಾö್ಯನAತರ ದೇಶವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸುವಲ್ಲಿ ಅವರು ಕೈಗೊಂಡ ನಿರ್ಧಾರಗಳು ಇಂದಿಗೂ ಮಾದರಿಯಾಗಿವೆ ಎಂದರು. ಈ ಸಂದರ್ಭ ಸೋಮವಾರಪೇಟೆ ಇಂದಿರಾ ಕ್ಯಾಂಟೀನ್‌ನ ವ್ಯವಸ್ಥಾಪಕ ಹೆಚ್.ಡಿ. ಪವನ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ರವೀಂದ್ರ, ಅಜಯ್, ರವಿ, ಪಳನಿಸ್ವಾಮಿ, ವೇಲುಸ್ವಾಮಿ, ಧರ್ಮ, ನಾಗರಾಜು, ಶೇಷಪ್ಪ, ಕುಮಾರ, ನವೀನ್ ಸೇರಿದಂತೆ ಇತರರು ಇದ್ದರು.

ಬ್ಲಾಕ್ ಕಾಂಗ್ರೆಸ್‌ನಿAದ : ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್ ಅವರು ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು, ದೇಶದ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವಿ ನಾಯಕಿಯರಲ್ಲಿ ಒಬ್ಬರಾದ ಇಂದಿರಾ ಗಾಂಧಿಯವರ ಸೇವೆ ಹಾಗೂ ಅವರು ತೆಗೆದುಕೊಳ್ಳುತಿದ್ದ ನಿರ್ಧಾರಗಳಿಂದ ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು. ಇಂದಿರಾ ಗಾಂಧಿಯವರು ಮೊದಲ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ೧೯೭೧ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ನಿರ್ಣಾಯಕ ನಾಯಕತ್ವ ನೀಡಿದರು. ದೇಶದ ಕೃಷಿ ಉತ್ಪಾದನೆ ಹೆಚ್ಚಿಸಿದ ಹಸಿರು ಕ್ರಾಂತಿ, ಬ್ಯಾಂಕುಗಳು ಹಾಗೂ ಪ್ರಮುಖ ಕೈಗಾರಿಕೆಗಳ ರಾಷ್ಟಿçÃಕರಣ ಹಾಗೂ ಬಲಿಷ್ಠ ವಿದೇಶಾಂಗ ನೀತಿಗಳು ಅವರ ಆಡಳಿತದ ಪ್ರಮುಖ ಘಟ್ಟವಾಗಿವೆ ಎಂದರು.

ಈ ಸಂಧರ್ಭ ಪಕ್ಷದ ಪ್ರಮುಖರಾದ ಕೆ.ಎ. ಆದಮ್, ಎಚ್. ಸಿ. ನಾಗೇಶ್, ಬಿ. ಎನ್. ಬಸವರಾಜು, ಶೀಲಾ ಡಿಸೋಜ, ಬಿ. ಸಿ. ವೆಂಕಟೇಶ್, ಇಂದ್ರೇಶ್, ಮಹಮ್ಮದ್ ಬೇಟು, ಭುವನೇಶ್, ಮತ್ತಿತರರು ಇದ್ದರು.