ನಾಪೋಕ್ಲು, ನ. ೧೯ : ಧಾನ್ಯ ಲಕ್ಷಿö್ಮಯನ್ನು ಬರಮಾಡಿಕೊಳ್ಳುವ ಪುತ್ತರಿ ಹಬ್ಬವನ್ನು ಡಿಸೆಂಬರ್ ೪ ರಂದು ಗುರುವಾರ ಆಚರಿಸುವಂತೆ ನಿರ್ಧರಿಸಲಾಯಿತು.
ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಬುಧವಾರ ಜ್ಯೋತಿಷ್ಯದ ಪ್ರಕಾರ ದಿನ ನಿಗದಿ ಮಾಡಲಾಯಿತು.
ಕಕ್ಕಬೆ - ಕುಂಜಿಲ ಗ್ರಾಮ ಪಂಚಾಯಿತಿಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾ ಲಯದ ತಕ್ಕ ಮುಖ್ಯಸ್ಥರು, ವ್ಯವಸ್ಥಾಪನಾ ಸಮಿತಿ ಪ್ರಮುಖರ ಹಾಗೂ ಭಕ್ತರ ಸಮ್ಮುಖದಲ್ಲಿ ಅಮ್ಮಂಗೇರಿ ಜ್ಯೋತಿಷಿ ಶಶಿಕುಮಾರ್ ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದರು.
ಪಾಡಿ ಶ್ರೀ ಇಗ್ಗುತಪ್ಪ ದೇವರ ದೇವತಕ್ಕರಾದ ಪರದಂಡ ಕುಟುಂಬಸ್ಥರು ಮತ್ತು ಪಾಡಿಗೆ ಒಳಪಟ್ಟ ೧೨ ತಕ್ಕ ಮುಖ್ಯಸ್ಥರ ಐನ್ಮನೆಗಳಿಂದ ``ಪಾಲುಬೈವಾಡಿ’’ ಆಗಮನದೊಂದಿಗೆ ಹಬ್ಬದ ದಿನ ಬಿರ್ಚ್ಯಾರ್ ಕಲಾಡ್ಚ ಹಬ್ಬದ ದಿನ ನಿಗದಿಗೊಳಿಸಲಾಯಿತು.
ಅದರಂತೆ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿ ಯಲ್ಲಿ ಡಿಸೆಂಬರ್ ೪ ರಂದು ಗುರುವಾರ ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನ ಹುತ್ತರಿ ಹಬ್ಬ ಆಚರಣೆ. ೪ಆರನೆ (ಮೊದಲ ಪುಟದಿಂದ) ರಾತ್ರಿ ೮.೧೦ ಗಂಟೆU ನೆರೆ ಕಟ್ಟುವುದು, ರಾತ್ರಿ ೯.೧೦ ಗಂಟೆಗೆ ಕದಿರು ತೆಗೆಯುವುದು. ತೀರ್ಥ ಪ್ರಸಾದಕ್ಕೆ ೧೦.೧೦ ಗಂಟೆಗೆ ಮುಹೂರ್ತ ನಿಗದಿಪಡಿಸಲಾಯಿತು.
ನಾಡಿನಾದ್ಯಂತ ರಾತ್ರಿ ೮.೪೦ ಗಂಟೆಗೆ ನೆರೆ ಕಟ್ಟುವುದು, ರಾತ್ರಿ ೯.೪೦ ಗಂಟೆಗೆ ಕದಿರು ತೆಗೆಯುವುದು, ಭೋಜನಕ್ಕೆ ರಾತ್ರಿ ೧೦.೪೦ ಗಂಟೆಗೆ ಮುಹೂರ್ತ ನಿಗದಿಪಡಿಸಲಾಯಿತು.
ಇದಕ್ಕೂ ಮುನ್ನ ಡಿಸೆಂಬರ್ ೪ ರಂದು ಗುರುವಾರ ಹಗಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ ನಡೆಯಲಿದೆ. ಇದಕ್ಕೆ ಸಂಬAಧಿಸಿದAತೆ ಬುಧವಾರದಿಂದ ಹಬ್ಬದವರೆಗೆ ದೇವರ ಕಟ್ಟು ವಿಧಿಸಲಾಗಿದ್ದು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ನಿಯಮ ಪಾಲನೆ ಮಾಡುವಂತೆ ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭ ದೇವಾಲಯದ ಅಭಿವೃದ್ಧಿ ಕಾರ್ಯ, ಬ್ರಹ್ಮ ಕಲಶೋತ್ಸವ ಹಾಗೂ ಪೂಜಾ ವಿಧಿಗಳ ಬಗ್ಗೆ ಕೇಳಿ ಬಂದ ಪ್ರಶ್ನೆಗಳಿಗೆ ಜ್ಯೋತಿಷ್ಯದ ಪ್ರಕಾರ ಸೂಕ್ತ ಉತ್ತರವನ್ನು ಪಡೆದುಕೊಳ್ಳಲಾಯಿತು.
ನಂತರ ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇವತಕ್ಕ ಹಾಗೂ ಭಕ್ತಜನ ಸಂಘದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿ ಪುತ್ತರಿ ಹಬ್ಬದ ಆಚರಣೆ ಹಿರಿಯರ ಕಾಲದಿಂದ ಆಚರಿಸಿಕೊಂಡು ಬಂದಿದ್ದು ಅದನ್ನು ಯಥಾವತ್ತಾಗಿ ಪಾಲಿಸಿ. ಧಾನ್ಯ ಲಕ್ಷಿö್ಮಯನ್ನು ಮನೆಗೆ ಕರೆತರುವ ಹಬ್ಬವನ್ನು ಎಲ್ಲರೂ ನಿಗದಿಪಡಿಸಿದ ಸಮಯದಲ್ಲೇ ಆಚರಿಸುವಂತಾಗಬೇಕು. ದೇಶಕಟ್ಟನ್ನು ಎಲ್ಲರೂ ಪಾಲಿಸಬೇಕು ಎಂದರು.
ಪ್ರತಿಕೂಲ ಹವಾಮಾನ, ಕಾಡುಪ್ರಾಣಿಗಳ ಉಪಟಳದ ನಡುವೆಯೂ, ಕೊಡಗಿನ ಭಕ್ತಾದಿಗಳು ಅಲ್ಪಮಟ್ಟದಲ್ಲಿ ಆದರೂ ಭತ್ತದ ಬೆಳೆ ಬೆಳೆದು ಅನಾದಿ ಕಾಲದಿಂದಲೂ ನಡೆದು ಬರುತ್ತಿರುವ ಪುತ್ತರಿಯ ಆಚರಣೆಗೆ ಮೆರುಗು, ಸಂಭ್ರಮ ತಂದಿದ್ದಾರೆ. ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಭತ್ತದ ಬೆಳೆ, ಕೇವಲ ಅನ್ನ ಆಹಾರಕ್ಕೆ ಸೀಮಿತವಾಗದೆ, “ಸಣ್ಣಕ್ಕಿ” ಯ ಬಳಕೆ ಕೊಡವರ ಜೀವನದಲ್ಲಿ... ಐನ್ಮನೆಗಳಲ್ಲಿ, “ನೆಲಕ್ಕಿ ನಡುಬಾಡೆ”ಯ ಶುಭಾರಂಭಗಳಲ್ಲಿ “ಒಕ್ಕಪಟ್ಟೇಧಾರನ” ಪ್ರಾರ್ಥನೆಯ ನಂತರ ದೀಪದತ್ತ ಪ್ರೋಕ್ಷಣೆಯೊಂದಿಗೆ..... ಮೊದಲ್ಗೊಂಡು, ವಧು-ವರರ ಶಿರದ ಮೇಲೆ ಆಶೀರ್ವದಿಸಿ ಸುರಿಯುವುದರೊಂದಿಗೆ, ಕೊಡವ ವ್ಯಕ್ತಿಯೊಬ್ಬನ ಅಂತಿಮ ಯಾತ್ರೆಯಲ್ಲಿ ತನ್ನ ಮನೆಯಿಂದ “ಕೇಕೊಳ”ದ ರುದ್ರಭೂಮಿಗೆ, ದಾರಿಯುದ್ದಕ್ಕೂ ಧಾನ್ಯ ಮತ್ತು ಭತ್ತ, ಅರಿಶಿನದ ಸಮೀಕರಣದ “ಸಮಿಯ”ದ ಬಳಕೆಯೊಂದಿಗೆ ಮುಕ್ತಾಯಗೊಳ್ಳುವುದು ಎಂದು ವಿವರಿಸಿದರು.
ಇಂಥ ಪವಿತ್ರ ಧಾನ್ಯದ ಕಠಾವಿನ ಸಂದರ್ಭ. ಅನಾದಿ ಕಾಲದಿಂದ ಹಬ್ಬ ಮತ್ತು ಪುತ್ತರಿಯ ಶುಭಮುಹೂರ್ತ ನಿಶ್ಚಯವಾದ ದಿನ ಪೂರ್ವಾಹ್ನ ತೆರಳಿ ಪರಂಪರೆಯAತೆ ಅಮಾವಾಸ್ಯೆಯಂದು ಆದಿಸ್ತಾನ ಮಲ್ಮ ಬೆಟ್ಟಕ್ಕೆ ಭಕ್ತಿಯಿಂದ ತೆರಳಿ ಪಾಡಿ ನೆಲಜಿ ಪೇರೂರು ಗ್ರಾಮದ ತಕ್ಕ ಮುಖ್ಯಸ್ಥರು ದೇಶ ಕಟ್ಟು ಜಾರಿಗೊಳಿಸಿ ೧೫ ದಿವಸಗಳ ನಂತರ ಹುಣ್ಣಿಮೆಯ ಮುನ್ನಾದಿನ ಬಿರ್ಚ್ಯಾರ್ ಕಲಾಡ್ಚ ಹಬ್ಬದ ದಿನ ಅದನ್ನು ಅಂತ್ಯಗೊಳಿಸುವುದು ವಾಡಿಕೆಯಾಗಿದೆ ಎಂದು ತಿಳಿಸಲಾಯಿತು.
ಜ್ಯೋತಿಷ್ಯ ಶಶಿಕುಮಾರ್ ,ಕಣಿಯರ ನಾಣಯ್ಯ ಕುಟುಂಬದವರು ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದ ಬಳಿಕ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಆನಂತರ ದಿನ ನಿಗದಿ ಪಟ್ಟಿಗೆ ವಿಶೇಷ ಪ್ರಾರ್ಥನೆಯ ಮೂಲಕ ಅರ್ಚಕರಿಗೆ ನೀಡಿ ಅರ್ಚಕ ಜಗದೀಶ್ ಅವರು ಪೂಜೆ ನೆರವೇರಿಸಿದ ಬಳಿಕ ತೀರ್ಥ ಪ್ರಸಾದ ನೀಡುವುದರ ಮೂಲಕ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ದೇವಾಲಯದ ಆಡಳಿತ ಅಧಿಕಾರಿ ರವಿಕುಮಾರ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಚಮಂಡ ರಾಜ ಪೂವಣ್ಣ, ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಸಿಬ್ಬಂದಿಗಳು, ಪ್ರಮುಖರಾದ ಕಲ್ಯಾಟಂಡ ಮುತ್ತಪ್ಪ, ಕಾಂಡAಡ ಜೋಯಪ್ಪ, ಪಾಂಡAಡ ನರೇಶ್, ತಕ್ಕ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- ದುಗ್ಗಳ ಸದಾನಂದ.