ಮಡಿಕೇರಿ, ನ. ೧೯ : ಏಷ್ಯಾದ ಅತ್ಯಂತ ದೊಡ್ಡ ಸಾಹಿತ್ಯೋತ್ಸವ ಎಂದೇ ಪರಿಗಣಿತವಾದ ಕೇರಳ ಸಾಹಿತ್ಯೋತ್ಸವಕ್ಕೆ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಸೇರಿದಂತೆ ಕರ್ನಾಟಕದಿಂದ ಮೂವರು ಲೇಖಕರು ಆಯ್ಕೆಯಾಗಿದ್ದಾರೆ.

ಈ ಬಾರಿ ಜರ್ಮನಿ ದೇಶ ಪ್ರಾಯೋಜಕತ್ವ ವಹಿಸಿರುವ ೯ ನೇ ಕೇರಳ ಸಾಹಿತ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಬೂಕರ್ ಪ್ರಶಸ್ತಿ ಪಡೆದಿರುವ ದೀಪಾಭಾಸ್ತಿ, ಭಾನು ಮುಷ್ತಾಕ್, ವಿವೇಕ್ ಶಾನ್ ಭಾಗ್ ಆಯ್ಕೆಯಾಗಿದ್ದಾರೆ.

ಕೇರಳದ ಕೊಯಿಕೋಡ್ ನ ಕಡಲ ತೀರದಲ್ಲಿ ಜನವರಿ ೨೨ ರಿಂದ ೨೫ ರವರೆಗೆ ಸಾಹಿತ್ಯೋತ್ಸವ ಜರುಗಲಿದೆ. ಜರ್ಮನಿ ಸೇರಿದಂತೆ ೧೫ ದೇಶಗಳ ಲೇಖಕರು, ಸಾಹಿತಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಗತ್ತಿನಾದ್ಯಂತಲಿನಿAದ ೪೫೦ ಲೇಖಕರು ಕಡಲತೀರದ ೪ಆರನೇ ಪುಟಕ್ಕೆ (ಮೊದಲ ಪುಟದಿಂದ)೭ ಸ್ಥಳಗಳಲ್ಲಿ ಆಯೋಜಿತ ೩೩೦ ಗೋಷ್ಠಿಗಳಲ್ಲಿ ಓದುಗರೊಂದಿಗೆ ಸಂವಾದ ನಡೆಸಲಿದ್ದಾರೆ. ಮಲಯಾಳ, ಕನ್ನಡ ಸೇರಿದಂತೆ ವಿಶ್ವದ ವಿವಿಧ ಭಾಷಾ ಸಾಹಿತ್ಯದ ಬಗ್ಗೆ ಈ ಸಾಹಿತ್ಯೋತ್ಸವದಲ್ಲಿ ಚರ್ಚೆ, ಸಂವಾದದ ಗೋಷ್ಠಿಗಳು ಆಯೋಜಿಸಲ್ಪಟ್ಟಿವೆ.

ಕೊಯಿಕೋಡ್‌ನಲ್ಲಿ ೪ ದಿನಗಳು ಆಯೋಜಿತ ಈ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವದ ನಾನಾ ಕಡೆಗಳಿಂದ ೫ ಲಕ್ಷ ಸಾಹಿತ್ಯಾಸಕ್ತರು ಬರುವ ನಿರೀಕ್ಷೆಯಿದ್ದು, ಈ ಮೂಲಕ ರೂ. ೧೫೦ ಕೋಟಿ ವಹಿವಾಟನ್ನು ಕೋಯಿಕೋಡ್ ನಗರ ನಿರೀಕ್ಷಿಸುತ್ತಿದೆ.

ಪ್ರತಿಷ್ಠಿತ ಸಾಹಿತ್ಯೋತ್ಸವಕ್ಕೆ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ದೀಪಾಭಾಸ್ತಿ, ಕೇರಳದ ಕಡಲತೀರದಲ್ಲಿ ಸಾಹಿತ್ಯ ಕಲರವ ಉಂಟು ಮಾಡುವ ಈ ಸಾಹಿತ್ಯ ಸಮಾವೇಶ ಬೇರೆಲ್ಲಾ ಸಾಹಿತ್ಯ ಕಾರ್ಯಕ್ರಮಗಳಿಗಿಂತ ಭಿನ್ನವಾಗಿರುತ್ತದೆ. ಕೇರಳ ಮಾತ್ರವಲ್ಲದೇ ವಿಶ್ವದ ಹಲವೆಡೆಗಳ ಗಂಭೀರ ಓದುಗರು, ಚಿಂತಕರೊAದಿಗೆ ಸಮಾಲೋಚನೆ ಮಾಡುವ ಅವಕಾಶವೂ ಇಲ್ಲಿ ದೊರಕುತ್ತದೆ. ಪ್ರತಿಷ್ಠಿತ ಸಾಹಿತ್ಯೋತ್ಸವಕ್ಕೆ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದರು.