ಮಡಿಕೇರಿ, ನ. ೧೯: ಕೊಡವ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯನ್ನು ಏಪ್ರಿಲ್ ತಿಂಗಳಿ ನಲ್ಲಿ ಆಯೋಜಿಸಲಾಗಿದೆ ಎಂದು ಆತಿಥ್ಯ ವಹಿಸಿರುವ ಮುಕ್ಕಾಟೀರ (ದೇವಣಗೇರಿ) ಕುಟುಂಬದ ಪ್ರಮುಖರು ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಎಂ.ಸಿ. ಕರುಂಬಯ್ಯ, ೫ನೇ ವರ್ಷದ ಫುಟ್ಬಾಲ್ ಪಂದ್ಯಾಟದ ಆತಿಥ್ಯವನ್ನು ಮುಕ್ಕಾಟೀರ (ದೇವಣಗೇರಿ) ವಹಿಸಿಕೊಂಡಿದ್ದು, ಸುಮಾರು ೧೦೦ ತಂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಏಪ್ರಿಲ್ ೭ ರಿಂದ ೧೨ರ ತನಕ ಗೋಣಿಕೊಪ್ಪ ಸಮೀಪದ ಜೋಡುಬೀಟಿಯ ಆ್ಯಥ್ಲಾನ್ ಟರ್ಫ್ ಕ್ರೀಡಾಂಗಣದಲ್ಲಿ ೫ ಎ ಸೈಡ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಒಂದು ಕುಟುಂಬದ ತಂಡದಲ್ಲಿ ೨ ಕೊಡವ ಅತಿಥಿ ಆಟಗಾರರನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದರು.
ಕೊಡವ ಕುಟುಂಬಗಳನ್ನು ಒಂದುಗೂಡಿಸಲು ಈ ಪಂದ್ಯಾಟ ಪೂರಕವಾಗಿದೆ. ಕೊಡಗಿನಲ್ಲಿ ಫುಟ್ಬಾಲ್ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿಯಿದ್ದು, ಉದಯೋನ್ಮುಖ ಆಟಗಾರರಿಗೆ ಇದು ವೇದಿಕೆಯಾಗಲಿದೆ. ಮೊದಲು ನೋಂದಾಯಿಸಿಕೊAಡ ೧೦೦ ತಂಡಗಳಿಗೆ ಆಟವಾ ಡಲು ಅವಕಾಶ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ ೯೩೪೧೯೫೭೮೯೫, ೯೮೪೫೩೪೩೯೭೦ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು.
ಗೋಷ್ಠಿಯಲ್ಲಿ ಕುಟುಂಬ ಸದಸ್ಯರುಗಳಾದ ಎಂ.ಎಸ್. ಸೋಮಯ್ಯ, ಎಂ.ಎಸ್. ಬೋಪಣ್ಣ, ಶಿಲ್ಪಾ ನಂಜಪ್ಪ, ಸುಚಿ ಅಯ್ಯಣ್ಣ, ಜ್ಯುತಿಕ ಬೋಪಣ್ಣ ಹಾಜರಿದ್ದರು.