ಮಡಿಕೇರಿ, ನ. ೧೮: ಗೋವಾದಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ಆಹ್ವಾನಿತ ತಂಡಗಳ ನಡುವಿನ “ಗೋವಾ ಸೆವೆನ್ಸ್” ರಗ್ಬಿ ಪಂದ್ಯಾವಳಿಯಲ್ಲಿ ಮಾಜಿ ಅಂತರರಾಷ್ಟಿçÃಯ ರಗ್ಬಿ ಆಟಗಾರ ಕೊಡಗಿನ ಮಾದಂಡ ತಿಮ್ಮಯ್ಯ ಅವರು ಪ್ರತಿನಿಧಿಸಿದ್ದ ಗೋವಾ ತಂಡ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ.

ಫೈನಲ್ ಪಂದ್ಯದಲ್ಲಿ ಡೆಲ್ಲಿ ಹರಿಕೇನ್ ಕ್ಲಬ್ ತಂಡದ ವಿರುದ್ಧ ಗೋವಾ ತಂಡವು ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಹೈದರಾಬಾದ್ ಬ್ಲ್ಯಾಕ್ ಹಾಕ್ಸ್ ತಂಡವನ್ನು ಮಣಿಸಿ ಗೋವಾ ತಂಡವು ಫೈನಲ್ ಪ್ರವೇಶಿಸಿತು. ಲೀಗ್ ಹಂತ ಪಂದ್ಯದಲ್ಲಿ ಮಾದಂಡ ತಿಮ್ಮಯ್ಯ ಪ್ರತಿನಿಧಿಸಿದ್ದ ಗೋವಾ ತಂಡ ಸಿಂಗಾಪುರ ಫ್ಲೆöÊಯರ್ಸ್ ಹಾಗೂ ಕೇರಳ ವೋಲ್ಫ್ ಪ್ಯಾಕ್ಸ್ ತಂಡವನ್ನು ಮಣಿಸಿತು. ಗೋವಾ ತಂಡದಲ್ಲಿ ಆಸ್ಟೆçÃಲಿಯಾ, ಅಮೇರಿಕಾ ತಂಡದ ಆಟಗಾರರು ಇದ್ದರು.