ಕಡಂಗ: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಾಯಕ ಮದನ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮಂತ್ರಿಮAಡಲದ ಸದಸ್ಯರಾದ ರಿಜ್ವಾನ ಸಹನಾ, ಅರ್ಷಿಯ, ಸಹದ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಹಾಜರಿದ್ದರು.ಕಡಂಗ: ಅರಮೇರಿ ಎಸ್ ಎಂ ಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೈಂಡ್ ಆ್ಯಂಡ್ ಮ್ಯಾಟರ್ಸ್ ಸಂಸ್ಥೆ ವತಿಯಿಂದ ಮಾನಸಿಕ ಮತ್ತು ಆರೋಗ್ಯ ಕುರಿತಾದ ಕಾರ್ಯಾಗಾರ ನಡೆಸಲಾಯಿತು. ಸುಮಾರು ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಟುವಟಿಕೆಯ ಆಧಾರಿತ ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಸಂಸ್ಥೆಯ ಶಿಕ್ಷಕಿಯಾದ ಹೇಮಾವತಿ ದಿನದ ಮಹತ್ವವನ್ನು ತಿಳಿಸಿದರು ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕುಸುಮಾ ಟಿಟೋ, ಗೈಡ್ ಕ್ಯಾಪ್ಟನ್ ಮೈಥಲಿ ರಾವ್ ಉಪಸ್ಥಿತರಿದ್ದರು .

ಸುಂಟಿಕೊಪ್ಪ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪಿ.ಎಫ್.ಸಬಾಸ್ಟಿನ್ ಚಾಲನೆ ನೀಡಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಫೀಕ್‌ಖಾನ್ ಅವರು ವಹಿಸಿ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಕೃಷಿಕ ಶ್ರೀರಾಮ್, ಶಾಲಾ ಮುಖ್ಯೋಪಾದ್ಯಾಯನಿ ಗೀತಾ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ ಸಹಶಿಕ್ಷಕರು ಇದ್ದರು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಾಪೋಕ್ಲು: ಬಲ್ಲಮಾವಟಿ ವೃತ್ತದ ಕೊಳಕೇರಿ ಪ್ರಥಮ ಮತ್ತು ಕುವಲೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ರಮ್ಲ ಸಿ.ಆರ್. ರವರು ವಹಿಸಿದ್ದರು. ಕೊಳಕೇರಿ ಚಪ್ಪೆಂಡಡಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಾವತಿ ಹೆಚ್.ಎ. ಮಾತನಾಡಿದರು.

ಗ್ರಾಮ ಪಂಚಾಯತಿ ಸದಸ್ಯೆ ಅಮೀನ ಮಾತನಾಡಿ, ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದರಿಂದ ಮಕ್ಕಳು ದೈಹಿಕ ಮಾನಸಿಕವಾಗಿ ಸದೃಢರಾಗುತ್ತರೆ ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಆರೋಗ್ಯಾಧಿಕಾರಿ ಛಾಯಾ ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ರೀತಿಯ ಮನೋರಂಜನಾ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು.

ಇದೇ ಸಂದರ್ಭ ಚಪ್ಪೆಂಡಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೇಮಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶ್ವೇತಾ, ಸಫ್ರೀನ, ಸಹಾಯಕಿ ಗೀತಾ ಹಾಜರಿದ್ದರು.ಸಿದ್ದಾಪುರ : ಚೆನ್ನಯ್ಯನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಸಭೆ ಶಾಲೆಯ ಮುಖ್ಯ ಶಿಕ್ಷಕಿ ರಾಜಮ್ಮ ದಿಲಿಕುಮಾರ್ ನೇತೃತ್ವದಲ್ಲಿ ನಡೆಯಿತು.

ಮಕ್ಕಳ ದಿನಾಚರಣೆ ನಡೆದ ಪೋಷಕರ ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದ ಮುಖ್ಯ ಶಿಕ್ಷಕಿ ರಾಜಮ್ಮ, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಹಾಗೂ ಕಲಿಕೆಯ ಬಗ್ಗೆ ಗಮನ ಹರಿಸಬೇಕೆಂದು ತಿಳಿಸಿದರು. ಪ್ರತಿನಿತ್ಯ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವಿ ಮಾಡಿದರು. ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಶಿಕ್ಷಕರು, ಮಕ್ಕಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಶಾಲಾ ಮಕ್ಕಳ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.

ಐಗೂರು: ಮಕ್ಕಳ ದಿನಾಚರಣೆಯನ್ನು ಕಾಜೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ನೆಹರೂ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಸಿಂಚನ ವಹಿಸಿದ್ದಳು. ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಾದ ಗಾನವಿ ಮತ್ತು ಕೌಶಿಕ್ ಕುಮಾರ್ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೆ.ಎಲ್. ಹೊನ್ನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸಿಆರ್‌ಪಿ ಗಿರೀಶ್, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಹಳೆ ವಿದ್ಯಾರ್ಥಿ ಸಂಘದ ಹೊನ್ನಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಆಶಾ, ಶಿಕ್ಷಕ ಸತೀಶ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಸ್ವರ್ಣ, ವಿದ್ಯಾ ಭಾಗವಹಿಸಿದ್ದರು. ವೀರಾಜಪೇಟೆ: ಮಕ್ಕಳ ದಿನಾಚರಣೆ ಪ್ರಯುಕ್ತ ವೀರಾಜಪೇಟೆಯ ಮಗ್ಗುಲ ದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಿತಿಮತಿ ಪಿಎಂಶ್ರೀ ಸರಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆಗೂಡಿ ಮಕ್ಕಳ ದಿನ ಆಚರಿಸಿದರು.

ಪಿಎಂಶ್ರೀ ಸರಕಾರಿ ಶಾಲೆಯ ಮಕ್ಕಳಿಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಆಡಳಿತ ಮಂಡಳಿ ವತಿಯಿಂದ ನರ್ಸರಿ, ಎಲ್‌ಕೆಜಿ, ಯುಕೆಜಿ, ಮಕ್ಕಳಿಗೆ ಬರೆಯಲು ಅನುಕೂಲವಾಗುವಂತಹ ವಸ್ತುಗಳನ್ನು ಜೊತೆಗೆ ಶಾಲೆಗೆ ಜಮಖಾನೆ, ಡಿಕ್ಷನರಿ ಇತ್ಯಾದಿ ಸಾಮಗ್ರಿಗಳನ್ನು ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಮಕ್ಕಳ ದಿನಾಚರಣೆಯನ್ನು ಪರಸ್ಪರ ಎರಡು ಶಾಲೆಯ ಮಕ್ಕಳು ಜತೆಗೂಡಿ ಸಂಭ್ರಮದಿAದ ಆಚರಿಸಿದ್ದೇವೆ. ಮಕ್ಕಳಲ್ಲಿ ಪರಸ್ಪರ ಸ್ನೇಹ, ಸಹಕಾರ, ಬ್ರಾತೃತ್ವ ಭಾವನೆ ಮೂಡಿದಾಗ ಮಾತ್ರ ಮೌಲ್ಯಯುತ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದರು. ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಲಿಟಲ್ ಸ್ಕಾಲರ್ಸ್ ವಿದ್ಯಾಸಂಸ್ಥೆ ವತಿಯಿಂದ ಏರ್ಪಡಿಸಲಾಗಿತ್ತು.

ಈ ಸಂದರ್ಭ ತಿತಿಮತಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರತಿಮಾ ರಂಜನ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮೇಲ್ವಿಚಾರಕರಾದ ರಿಚರ್ಡ್, ಎರಡು ಶಾಲೆಗಳ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶನಿವಾರಸಂತೆ: ಪಟ್ಟಣದ ಸುಪ್ರಜಾ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿ ಸಂಸತ್‌ನ ವಿದ್ಯಾರ್ಥಿಗಳು ಹಾಗೂ ಪ್ರಿಕೆಜಿಯ ಪುಟಾಣಿ ವಿದ್ಯಾರ್ಥಿಗಳು ಪ್ರಾಂಶುಪಾಲೆ ಡಿ.ಸುಜಲಾದೇವಿ ಜ್ಯೋತಿ ಬೆಳಗಿಸಿ, ಗಿಡಕ್ಕೆ ನೀರು ಹಾಕಿ, ಪುಟ್ಟ ವಿದ್ಯಾರ್ಥಿನಿ ಗಿಲಕಿ ಬಾರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿದ್ಯಾರ್ಥಿಗಳು ನಾಡು-ನುಡಿಯ ಕುರಿತು ಹಾಗೂ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಭಾಷಣ ಮಾಡಿ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಪ್ರಾಂಶುಪಾಲೆ ಸುಜಲಾದೇವಿ ದಿನದ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.ಶನಿವಾರಸಂತೆ: ಮಕ್ಕಳ ದಿನಾಚರಣೆಗಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಅಚ್ಚರಿ ಕಾದಿತ್ತು. ಶಾಲಾ ಆವರಣದಲ್ಲಿ ಸ್ವತಃ ನೆಹರೂರವರೇ ಗುಲಾಬಿ ಹೂವು ಹಿಡಿದು ಮಕ್ಕಳನ್ನು ಒಬ್ಬೊಬ್ಬರಾಗಿ ಸ್ವಾಗತಿಸುತ್ತಿದ್ದರು. ನೆಹರೂ ಅವರನ್ನು ಕಂಡ ಮಕ್ಕಳು ಸಹ ಮಂತ್ರಮುಗ್ಧರಾಗಿದ್ದರು.

ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮುಖ್ಯಶಿಕ್ಷಕ ಸಿ.ಎಸ್. ಸತೀಶ್ ಶಾಲೆಯಲ್ಲಿ ನೆಹರೂ ಅವರ ಪ್ರತಿಕೃತಿ ರಚಿಸಿ ನೆಹರೂರವರೇ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ, ಶಾಲೆಗೆ ಆತ್ಮೀಯವಾಗಿ ಸ್ವಾಗತಿಸುವಂತೆ ಶಾಲಾ ಆವರಣದಲ್ಲಿ ನಿಲ್ಲಿಸಲಾಗಿತ್ತು.

ನೆಹರೂರವರ ಪ್ರತಿಕೃತಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿAದುವಾಗಿತ್ತು. ಅಲ್ಲದೇ ವಿದ್ಯಾರ್ಥಿಗಳು ನೆಹರೂರವರೊಂದಿಗೆ ಕುಳಿತು ಸಿಹಿಮಾತು, ಹರಟೆಯಲ್ಲಿ ತೊಡಗಿರುವಂತೆ ಕೂಡ ಸನ್ನಿವೇಶವನ್ನು ರಚಿಸಲಾಗಿತ್ತು.

ಈ ಸಂದರ್ಭ ಮುಖ್ಯಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಿದ್ದ ನೆಹರೂರವರ ವ್ಯಕ್ತಿತ್ವವನ್ನು ಜೀವಂತವಾಗಿ ತೋರಿಸುವ ಮೂಲಕ ಮಕ್ಕಳಲ್ಲಿ ಸಂತೋಷ ಮತ್ತು ಪ್ರೇರಣೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪೋಷಕರು-ಶಿಕ್ಷಕರ ಸಭೆ: ಮಕ್ಕಳ ದಿನಾಚರಣೆ ಪ್ರಯುಕ್ತ ಸರ್ಕಾರದ ವಿನೂತನ ಕಾರ್ಯಕ್ರಮವಾದ ಪೋಷಕ-ಶಿಕ್ಷಕರ ಸಭೆಯನ್ನು ಆಯೋಜಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದು; ಶಾಲಾಭಿವೃದ್ಧಿ, ದಾಖಲಾತಿ ಹೆಚ್ಚಳ, ಶಾಲಾ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದುಕೊಂಡರು. ಶಿಕ್ಷಕ ಜಾನ್ ಪಾವ್ಲ್ ಡಿಸೋಜ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.

ನಂತರ ನಡೆದ ವಿದ್ಯಾರ್ಥಿಗಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ೫ ನೇ ತರಗತಿ ವಿದ್ಯಾರ್ಥಿ ಬಿ.ಎಸ್. ಯುಗನ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಮನ್ವಿ ಎಂ.ಎಸ್.ತನ್ವಿತ್ ಹಾಗೂ ಓಂಕಾರ್ ಪಾಲ್ಗೊಂಡಿದ್ದರು. ಸಂಜೆಯವರೆಗೂ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.ಕೂಡಿಗೆ: ಕೂಡಿಗೆಯ ಸೈನಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಾಳಿನ ರಕ್ಷಕರು - ಶಾಶ್ವತ ಭವಿಷ್ಯಕ್ಕಾಗಿ ಯುವ ಮನಸ್ಸುಗಳ ಪೋಷಣೆ ಎಂಬ ಪ್ರೇರಣಾ ವಾಕ್ಯದಡಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಲೆಯ ಕಿರಿಯ ವಿದ್ಯಾರ್ಥಿಗಳಾದ ೬ನೇ ತರಗತಿಯ ಕೆಡೆಟ್ ಅನ್ವಿತಾ ಮತ್ತು ಕೆಡೆಟ್ ಪುನೀತ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕರ್ನಲ್ ಅಮರ್ ಜೀತ್‌ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪಪ್ರಾಂಶುಪಾಲರಾದ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲೆಯ ಪ್ರಥಮ ದಿವ್ಯ ಸಿಂಗ್, ಶಾಲಿನಿ ರಾವ್ ಹಾಗೂ ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದಿಂದ ವರ್ಣ ರಂಜಿತವಾದ, ಮನಮೋಹಕ ಹಾಗೂ ಮನರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಮಡಿಕೇರಿ : ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಶಿಕ್ಷಕರ ಸಂಭ್ರಮದಿAದ ಜರುಗಿತು. ಶಿಕ್ಷಕರೇ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿ, ಮಕ್ಕಳಿಗೆ ಹಬ್ಬದ ಸಂಭ್ರಮವನ್ನು ನೆನಪಿಸಿದರು. ಕಲಾ, ಕ್ರೀಡೆ, ಹಾಸ್ಯ ಮತ್ತು ಸಂಭ್ರಮಗಳ ಸಂಯೋಜನೆಯಾಗಿ ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಸ್ಮರಣೀಯ ಅನುಭವ ನೀಡಿತ್ತು.

ಶಾಲಾ ನಾಯಕ ಧಾರ್ಮಿಕ್ ಹಾಗೂ ಉಪನಾಯಕ ಶೌರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಕೌನ್ಸಿಲ್ ಲೀಡರ್‌ಗಳು ದೀಪ ಬೆಳಗಿಸಿದರು. ಶಿಕ್ಷಕಿ ಚಿತ್ರ ಮತ್ತು ತಂಡ ಪ್ರಸ್ತುತಪಡಿಸಿದ ಸ್ವಾಗತ ನೃತ್ಯ ಮಕ್ಕಳಲ್ಲಿ ಹೊಸ ಚೈತನ್ಯವನ್ನು ತುಂಬಿದರೆ, ಶಿಕ್ಷಕಿ ಪೊನ್ನಮ್ಮ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದ ಮಾಹಿತಿ ಪ್ರೇರಣಾದಾಯಕವಾಗಿತ್ತು.

ದಾಮೋದರ್ ಗೌಡ ಹಾಗೂ ತಂಡದವರು ಪ್ರದರ್ಶಿಸಿದ ಹಾಸ್ಯನಾಟಕ ಪ್ರಮುಖ ಆಕರ್ಷಣೆಯಾಗಿ ಹಾಸ್ಯದ ಹೊನಲನ್ನೇ ಹರಿಸಿತ್ತು. ದಿವ್ಯ ಹಾಗೂ ತಂಡದ ನೃತ್ಯಪ್ರದರ್ಶನ ಮತ್ತು ಸಂಗೀತ ಶಿಕ್ಷಕಿ ಪ್ರತಿಭಾ ತಂಡದವರ ಗಾಯನ ಕಾರ್ಯಕ್ರಮವೂ ಮಕ್ಕಳನ್ನು ರಂಜಿಸಿದವು.

ಶಾಲೆಯ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್. ಹಾಗೂ ನಾಗರಾಜ್ ಅವರು ಜನಪ್ರಿಯ ಚಲನಚಿತ್ರದ ಹಾಸ್ಯ ದೃಶ್ಯವನ್ನು ಪ್ರದರ್ಶಿಸಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು. ಶಾಲಾ ಆಡಳಿತ ನಿರ್ವಹಣಾಧಿಕಾರಿ ರವಿ ಪಿ “ಬೊಂಬೆ ಹೇಳುತೈತೆ ಹಾಡು ಮಕ್ಕಳನ್ನು ಮಂತ್ರಮುಗ್ಧಗೊಳಿಸಿತ್ತು.

ಶಿಕ್ಷಕರಾದ ಸುಮಂತ್, ವೀಣಾ ಎಂ.ಎA. ನಿರೂಪಿಸಿದರು. ಮಕ್ಕಳಿಗಾಗಿ ವಿವಿಧ ಕ್ರೀಡಾಕೂಟಗಳೂ ಆಯೋಜಿತವಾಗಿತ್ತು.

ಗೋಣಿಕೊಪ್ಪಲು : ಗೋಣಿಕೊಪ್ಪಲು ಲಯನ್ಸ್ ಶಾಲೆಯ ಆವರಣದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಮುಖ್ಯ ಅತಿಥಿ ಗಳಾಗಿ ಮಡಿಕೇರಿ ವೈದ್ಯ ಕೀಯ ಕಾಲೇಜಿನ ಇಎನ್‌ಟಿ ತಜ್ಞರಾದ ಡಾ. ಸತ್ಯಕಿ ಪಾಲ್ಗೊಂಡು ಮಾತನಾಡಿ, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಪ್ರೋತ್ಸಾಹ ಮತ್ತು ಅವಕಾಶ ನೀಡುವ ಮಹತ್ವವನ್ನು ವಿವರಿಸಿದರು. ಮಕ್ಕಳ ಸಮಗ್ರ ಬೆಳವಣಿಗೆಯತ್ತ ಶಾಲೆಯ ಬದ್ಧತೆಯನ್ನು ಅವರು ಪ್ರಶಂಸಿಸಿದರು. ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ನೃತ್ಯ, ಹಾಗೂ ಛದ್ಮವೇಷ ಪ್ರದರ್ಶನವನ್ನು ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶಿಕ್ಷಕರು ಕೂಡ ವಿವಿಧ ಆಟಗಳು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಶಿಕ್ಷಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಪಿ. ಬೋಪಣ್ಣ, ಕಾರ್ಯದರ್ಶಿ ಎಂ.ಬಿ. ಸೌಮ್ಯ, ಖಜಾಂಚಿ ಐ.ಎಂ. ಸೋಮಣ್ಣ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಧನು ಉತ್ತಯ್ಯ, ಕಾರ್ಯದರ್ಶಿ ಡಾ. ಸೂರಜ್ ಉತ್ತಪ್ಪ, ಖಜಾಂಚಿ ಕೆ.ಪಿ. ಅಚ್ಚಯ್ಯ ಮುಖ್ಯೋಪಾಧ್ಯಾಯಿನಿ ತಾಜ್ ತಂಗಮ್ಮ ಲಯನ್ಸ್ ಸದಸ್ಯರು, ಶಾಲಾ ವಿದ್ಯಾರ್ಥಿ ನಾಯಕ ರುಶಿಲ್ ತಮ್ಮಯ್ಯ, ಕ್ರೀಡಾ ನಾಯಕಿ ಪ್ರತೀಕ್ಷ ಪೊನ್ನಮ್ಮ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು.

ಕೊಯನಾಡು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಶಿಕ್ಷಕ-ಪೋಷಕರ ಮಹಾಸಭೆಯನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ದಾಖಲಾತಿ ಆಂದೋಲನದಲ್ಲಿ ಪೋಷಕರು ಸಹ ಸಕ್ರಿಯವಾಗಿ ಭಾಗಿಯಾಗುವಂತೆ ಮನವಿ ಮಾಡಲಾಯಿತು.

ಜೊತೆಗೆ ಬಾಲ್ಯ ವಿವಾಹ ನಿರ್ಬಂಧ, ಬಾಲಕಾರ್ಮಿಕ, ಪೋಕ್ಸೋ ಕಾಯಿದೆ, ವಿಶೇಷಚೇತನ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯಗಳು, ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಣೆಯ ವಿಧಾನಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಪೋಷಕರಿಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ್ ಬಿ.ಯು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ವನಿತಾಮಣಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಆಶಾ ಮೋಹನ್, ಗ್ರಾಮ ಪಂಚಾಯತ್ ಸದಸ್ಯ ನವೀನ್‌ಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಎಸ್.ಪಿ, ಶಿಕ್ಷಕ ವೃಂದ, ಪೋಷಕರು ಮತ್ತು