ಚೆಯ್ಯಂಡಾಣೆ, ನ. ೧೬: ಗ್ರಾಮೀಣ ಜನರಿಗೆ ವರವಾಗಿದ್ದ ಬಿಎಸ್‌ಎನ್‌ಎಲ್ ದೂರವಾಣಿ ವ್ಯವಸ್ಥೆ ಇದೀಗ ಶಾಪವಾಗಿ ಪರಿಣಮಿಸಿದೆ. ಬಿಎಸ್‌ಎನ್‌ಎಲ್ ಕಚೇರಿಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಡುತ್ತಿದ್ದು, ಟವರ್‌ಗಳು ಕೂಡ ನಿಷ್ಕಿçಯಗೊಳ್ಳುತ್ತಿವೆ. ಚೆಯ್ಯಂಡಾಣೆ ಬಿಎಸ್‌ಎನ್‌ಎಲ್ ಟವರ್ ಇದಕ್ಕೆ ಒಂದು ಉದಾಹರಣೆ.

ಜನರೇಟರ್ ಕಾರ್ಯ ಸ್ಥಗಿತಗೊಳಿಸಿ ಹಲವು ವರ್ಷಗಳೇ ಕಳೆದಿವೆ ಅನಿಸುತ್ತಿದೆ, ಇಲ್ಲಿ ಟವರ್, ಜನರೇಟರ್ ಎಲ್ಲವೂ ಮೂಕಪ್ರೇಕ್ಷಕರಂತೆ ನಿಂತಿವೆ.

ಇಲ್ಲಿ ಬಿಎಸ್‌ಎನ್‌ಎಲ್‌ನ ಯಾವುದೇ ಸಿಬ್ಬಂದಿಗಳು ಇಲ್ಲ, ಯಾರು ಕೂಡ ಟವರ್ ಕಡೆ ತಿರುಗಿಯೂ ನೋಡುತ್ತಿಲ್ಲ. ಮೊಬೈಲ್‌ಗಳಂತೂ ನೆಟ್ವರ್ಕ್ ಸಿಗದೆ ನಿಷ್ಕಿçಯವಾಗುತ್ತಿವೆ.

ಇಲ್ಲಿ ವಿದ್ಯುತ್ ಇಲ್ಲದಿದ್ದರೆ ಜನರೇಟರ್ ಚಾಲನೆಗೊಳಿಸಲು ಸಿಬ್ಬಂದಿಗಳು ಇಲ್ಲ, ವಿದ್ಯುತ್ ಸ್ಥಗಿತಗೊಂಡರೆ ನೆಟ್ವರ್ಕ್ ಇರಲ್ಲ, ಕಳೆದ ಕೆಲವು ವರ್ಷಗಳಿಂದ ಚೆಯ್ಯಂಡಾಣೆ ಪಟ್ಟಣದ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಈ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ನ್ಯಾಯಬೆಲೆ ಅಂಗಡಿಗೆ ಪಡಿತರ ಖರೀದಿಸಲು ಬಂದರೆ ಬೆರಳಚ್ಚು ಆಗದಿದ್ದರೆ ಮೊಬೈಲ್‌ಗೆ ಒಟಿಪಿ ಬರುವುದು ಸಮಸ್ಯೆಯಾಗಿದ್ದು, ಈ ಸಮಸ್ಯೆಯಿಂದ ಪಡಿತರ ಪಡೆಯಲು ಮೂರು ನಾಲ್ಕು ಬಾರಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜನೋಪಕಾರಿ ಸಂಸ್ಥೆಯಾಗಿದ್ದ ಬಿಎಸ್‌ಎನ್‌ಎಲ್ ಈ ದುಸ್ಥಿತಿಗೆ ಬಂದು ತಲುಪಿರುವುದು ವಿಷಾದಕರವೆಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಬಿಎಸ್‌ಎನ್‌ಎಲ್ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದಿದ್ದಾರೆ.