ಪೊನ್ನAಪೇಟೆ, ನ. ೧೬: ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು.ಕಾಲೇಜಿನಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಅನಗತ್ಯ ವಿಚಾರದ ಬಗ್ಗೆ ಮನಸ್ಸನ್ನು ಹರಿಬಿಡದೆ, ಏಕಾಗ್ರತೆಯನ್ನು ಅಳವಡಿಸಿಕೊಂಡು ಗುರಿಯ ಕಡೆ ಗಮನವಿಡಬೇಕು. ಸರಳತೆ ಮತ್ತು ಸಂಯಮದಿAದ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಕವಿ ಸಾಹಿತಿಗಳ ಚಿಂತನೆಗಳು ಸ್ವಸ್ಥ ಸಮಾಜಕ್ಕೆ ಯಾವ ರೀತಿ ಪೂರಕವಾಗಿವೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕೊಡವ ಎಜುಕೇಷನ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಸಿ.ಎಂ.ರಾಜ ನಂಜಪ್ಪ ಮಾತನಾಡಿ, ಬಹುಸಂಸ್ಕೃತಿಯ ನಾಡಾದ ಕನ್ನಡನಾಡು ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಮಾತನಾಡಿ, ಕನ್ನಡ ಎನ್ನುವುದು ಭಾಷೆ ಎನ್ನುವ ಅರ್ಥಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಕನ್ನಡ ಕನ್ನಡಿಗರ ಭಾವನೆಯಾಗಿದೆ. ಜೊತೆಗೆ ಕನ್ನಡಿಗರ ಮನಸ್ಸಿನಲ್ಲಿ ಕನ್ನಡ ಭಾಷೆ ಎನ್ನುವುದು ಅಭಿಮಾನ ಮತ್ತು ಸ್ವಾಭಿಮಾನದ ಧ್ಯೋತಕವಾಗಿ ಮೂಡಿದೆ ಎಂದರು.
ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಕನ್ನಡ ಸಾಹಿತ್ಯದ ಪರಂಪರೆ ಬೆಳೆದು ಬಂದ ಬಗೆ, ಕರ್ನಾಟಕ ಏಕೀಕರಣ ಚಳವಳಿಯ ಹಿನ್ನೆಲೆ ಮತ್ತು ಕನ್ನಡ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಗಳಿಸಿದ ಸಿ.ಐ.ಪಿ.ಯು. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂ.ವಿ. ದೀತ್ಯಾ ದೇಚಮ್ಮ, ನೇಪಾಳದಲ್ಲಿ ಆಯೋಜಿಸಿದ ಅಂತರ್ ರಾಷ್ಟಿçÃಯ ಮಟ್ಟದ ಅಥ್ಲೆಟಿಕ್ಸ್ ೫೦೦೦ ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದ ಸಮಯ್ ಗಣಪತಿಯವರನ್ನು ಅಭಿನಂದಿಸಲಾಯಿತು. ಜಾನಪದ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾನಪದ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯಮಾಡಿದರು.
ಉಪನ್ಯಾಸಕಿ ಡಾ. ಸುಶ್ಮಿತ. ಪಿ.ವಿ. ಸ್ವಾಗತಿಸಿ, ವಿದ್ಯಾರ್ಥಿನಿ ದೀಕ್ಷಾ ವಂದಿಸಿ, ಮೋಕ್ಷಾ ಮತ್ತು ಭಾಷಿತ .ಕೆ.ಡಿ. ನಿರೂಪಿಸಿದರು.