ಗೋಣಿಕೊಪ್ಪಲು, ನ. ೧೬: ಎರಡು ದಿನಗಳ ಕಾಲ ನಡೆದ ಬ್ಲೂ ಬ್ಯಾಂಡ್ ರೋಬಸ್ಟಾ ರ‍್ಯಾಲಿಯಲ್ಲಿ ೫೮ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿದರು. ಟಾಟಾ ಕಾಫಿ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟದ ಕಿರಿದಾದ ರಸ್ತೆಯಲ್ಲಿ ಸಾಗಿದ ಕಾರುಗಳು ಧೂಳೆಬ್ಬಿಸಿದÀವು.ರ‍್ಯಾಲಿ ಪಟುಗಳು ತಮ್ಮ ಕಾರುಗಳನ್ನು, ಜಿಪ್ಸಿ ವಾಹನಗಳನ್ನು ಓಡಿಸುತ್ತಾ ಮುಂದೆ ಸಾಗುತ್ತಿದ್ದರೆ, ಕಾಫಿ ತೋಟದ ಎರಡು ಬದಿಯಲ್ಲಿ ನಿಂತಿದ್ದ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಯ ಮೂಲಕ ಹುರಿದುಂಬಿಸಿದರು.
ಬ್ಲೂ ಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ರೋಬಸ್ಟಾ ೨೦೨೫ ರ‍್ಯಾಲಿಗೆ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಸಿ ಐ ಟಿ ಕಾಲೇಜು ಆವರಣದಲ್ಲಿ ನಿನ್ನೆ ಚಾಲನೆ ನೀಡಲಾಗಿತ್ತು. ತಾ.೧೬ರ ಸಂಜೆ ರೋಬಾಸ್ಟಾ ರ‍್ಯಾಲಿ ೨೦೨೫ ಮುಕ್ತಾಯ ಕಂಡಿತು. ಕೊಡಗಿನಲ್ಲಿ ಅಮ್ಮತ್ತಿಯ ರೋಬಸ್ಟಾ ೪ಏಳನೇ ಪುಟಕ್ಕೆ ಎಡ್ವೆಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಮುಂದಾಳತ್ವ ವಹಿಸಿತ್ತು.
.ಬ್ಲೂ ಬ್ಯಾಂಡ್ ಪ್ರಾಯೋಜಕತ್ವದಲ್ಲಿ ರ‍್ಯಾಲಿ ನಡೆದಿದ್ದು. ಎಂ ಆರ್ ಎಫ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ರ‍್ಯಾಲಿಗೆ ಸಹಯೋಗ ನೀಡಿದ್ದವು. ದೇಶದ ವಿವಿಧೆಡೆಯಿಂದ ೫೮ ಸ್ಪರ್ಧಿಗಳು ಭಾಗವಹಿಸಿದ್ದರು, ಈ ಬಾರಿ ರ‍್ಯಾಲಿಯಲ್ಲಿ ೭ ಮಹಿಳಾ ಸ್ಪರ್ಧಿಗಳು ಸ್ಪರ್ಧಿಸಿ, ಉತ್ತಮ ಪ್ರದರ್ಶನ ನೀಡಿದರು.
ರಾಷ್ಟçಮಟ್ಟದ ರ‍್ಯಾಲಿಯಲ್ಲಿ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್ ಪಡೆದ ರ‍್ಯಾಲಿ ಪಟುಗಳೂ ಭಾಗವಹಿಸಿದ್ದರು.
ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ಜವಾಬ್ದಾರಿಯನ್ನು ಉದ್ದಪಂಡ ತಿಮ್ಮಣ್ಣ, ಕುಂಞAಡ ಮಾಚಯ್ಯ ಮ್ಯಾಕ್ಸ್, ಜಮ್ಮಡ ಸೋಮಣ್ಣ ವಹಿಸಿದ್ದರು.
ಕಾಫಿ ತೋಟಗಳಲ್ಲಿ ಸಂಚರಿಸುವ ಕಾರು ಹಾಗೂ ರ‍್ಯಾಲಿ ಪಟುಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಸಣ್ಣಪುಟ್ಟ ಘಟನೆ ಹೊರತು ಪಡಿಸಿ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಅಮ್ಮತ್ತಿಯ ಶಾಲಾ ಮೈದಾನದಲ್ಲಿ ಮೂರನೇ ಆವೃತ್ತಿ ರೋಬಸ್ಟಾ ರ‍್ಯಾಲಿ ೨೦೨೫ ಸಂಜೆಯ ವೇಳೆ ಮುಕ್ತಾಯಕಂಡಿತು.
ಸಮಾರೋಪ ಸಮಾರಂಭ ಗೋಣಿಕೊಪ್ಪ ಸಮೀಪದ ಅತ್ತೂರಿನಲ್ಲಿರುವ ಪಾಮ್ ವ್ಯಾಲಿಯಲ್ಲಿ ನಡೆಯಿತು. ಅನೇಕ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.- ಹೆಚ್.ಕೆ. ಜಗದೀಶ್