ಮಡಿಕೇರಿ, ನ. ೧೬: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಅಕ್ಟೋಬರ್ ೧೭ರ ತೀರ್ಥೋತ್ಸವದ ದಿನದಿಂದ ಪ್ರಾರಂಭಿಸಲಾಗಿದ್ದ ಒಂದು ತಿಂಗಳ ಕಾಲದ ನಿರಂತರ ಅನ್ನಸಂತರ್ಪಣೆ ಕಾರ್ಯ ಕಿರು ಸಂಕ್ರಮಣದ ದಿನವಾದ ಭಾನುವಾರದಂದು ಮುಕ್ತಾಯಗೊಂಡಿತು. ಕೊಡಗು ಏಕೀಕರಣ ರಂಗ ತಲಕಾವೇರಿ ತೀರ್ಥೋದ್ಭವದ ಬಳಿಕ ಕಿರು ಸಂಕ್ರಮಣದ ತನಕ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಹಾಗೂ ಅನ್ನ ಸಂತರ್ಪಣೆ ಕಾರ್ಯವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ಬಾರಿ ೩೧ನೆಯ ವರ್ಷದ ಅನ್ನದಾನ ಕಾರ್ಯ ಜರುಗಿತು.
ಕೊಡಗು ಏಕೀಕರಣ ರಂಗದ ತಂಡದವರು ತಲಾ ಒಂದೊAದು ದಿನ ಒಬ್ಬರು ಇಬ್ಬರಂತೆ ಇಲ್ಲಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಈ ಕಾರ್ಯಕ್ಕೆ ಭಕ್ತಾದಿಗಳು ನೆರವಿನ ಹಸ್ತವನ್ನು ಆರ್ಥಿಕವಾಗಿ ವಸ್ತುಗಳ ರೂಪದಲ್ಲಿ ನೀಡುತ್ತಿದ್ದಾರೆ. ಅಲ್ಲದೆ ದೈನಂದಿನ ಅನ್ನ ಸಂತರ್ಪಣೆಯ ಸೇವಾ ಕಾರ್ಯದಲ್ಲೂ ಕೈಜೋಡಿಸುತ್ತಿರುವುದು ಸ್ಮರಣೀಯವಾಗಿದೆ. ಈ ವರ್ಷವೂ ಎಲ್ಲರ ಸಹಕಾರದೊಂದಿಗೆ ಅನ್ನ ಸಂರ್ಪಣೆ ಯಶಸ್ವಿಯಾಗಿದೆ ಎಂದು ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮು ಪೂವಯ್ಯ, ಮಂದಪAಡ ಸತೀಶ್, ತೇಲಪಂಡ ಪ್ರಮೋದ್ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ. ಕಿರು ಸಂಕ್ರಮಣದ ದಿನವಾದ ಇಂದು ಸುಮಾರು ಆರರಿಂದ ಎಂಟು ಸಾವಿರ ಮಂದಿ ಪಾಲ್ಗೊಂಡಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)
೧.೭೦ ಲಕ್ಷ ಜನರಿಗೆ ಅನ್ನ ಸಂತರ್ಪಣೆ
ಅಕ್ಟೋಬರ್ ೧೭ರಿಂದ ಈತನಕ ಸುಮಾರು ೧.೭೦ ಲಕ್ಷ ಜನರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ಇದಲ್ಲದೆ ೫೦ರಿಂದ ೬೦ ಸಾವಿರ ಮಂದಿಗೆ ಬೆಳಗ್ಗೆ ಉಪಹಾರ ಒದಗಿಸಲಾಗಿದೆ. ಬೆಳಗ್ಗಿನ ಉಪಹಾರವಾಗಿ ಇಡ್ಲಿ ವಡೆ ಸಾಂಬಾರ್, ಕೇಸರಿಬಾತು ಉಪ್ಪಿಟ್ಟು ಹಾಗೂ ಚಿಕೋರಿ ಮಿಶ್ರಣವಿಲ್ಲದ ಕೊಡಗಿನ ಬಿಸಿ ಬಿಸಿ ಕಾಫಿಯನ್ನು ವಿತರಿಸಲಾಗಿದೆ.
ಮಧ್ಯಾಹ್ನದ ಊಟವಾಗಿ ಅನ್ನ, ಸಾಂಬಾರ್ ಪಲ್ಯ ಪಾಯಸ ಉಪ್ಪಿನಕಾಯಿ ನೀಡಲಾಗುತ್ತಿತ್ತು. ನಾಪೋಕ್ಲುವಿನ ರವಿ ಸ್ವಾಮಿ ತಂಡ ಅಡುಗೆ ವ್ಯವಸ್ಥೆ ನಿರ್ವಹಿಸಿದರೆ, ಕೊಡಗು ಏಕೀಕರಣ ರಂಗದ ತಂಡದವರು ಇನ್ನಿತರ ಸ್ವಯಂ ಸೇವಕರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳೀಯ ಬುಡಕಟ್ಟು ಜನರು ಶುಚಿತ್ವದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಈ ಬಾರಿಯ ಅನ್ನಸಂತರ್ಪಣೆ ಕಾರ್ಯ ಮುಕ್ತಾಯಗೊಂಡಿದೆ.
ರೂ. ೨೦ ಲಕ್ಷ ವೆಚ್ಚ
ಈ ಬಾರಿಯ ಅನ್ನದಾನ ಕಾರ್ಯಕ್ಕೆ ಸುಮಾರು ೨೦ ಲಕ್ಷದಷ್ಟು ವೆಚ್ಚವಾಗಿದೆ. ಖರ್ಚಾದ ರೂ. ಇಪ್ಪತ್ತು ಲಕ್ಷ ಹಣವು ಭಕ್ತಾದಿಗಳಿಂದ ಸಂಗ್ರಹವಾಗಿದೆ. ಅಲ್ಲದೆ ಹೆಚ್ಚುವರಿ ಆಗಿಯೂ ಒಂದಷ್ಟು ಹಣ ಕ್ರೊಢೀಕರಣವಾಗಿದ್ದು ಇದು ಪಾರದರ್ಶಕ ರೀತಿಯಲ್ಲಿ ಕೊಡಗು ಏಕೀಕರಣ ರಂಗದ ಟ್ರಸ್ಟ್ನ ಖಾತೆಯಲ್ಲಿರುತ್ತದೆ ಎಂದು ಪ್ರಮುಖರು ಮಾಹಿತಿ ನೀಡಿದ್ದಾರೆ - ಶಶಿ ಸೋಮಯ್ಯ