ಮಡಿಕೇರಿ, ನ. ೧೫: ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಸಂದೇಶ ಹರಿಬಿಟ್ಟಿರುವ ಪ್ರಕರಣ ಬೆಳೆಕಿಗೆ ಬಂದಿದ್ದು, ಈ ಬಗ್ಗೆ ಬೆಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಪೊನ್ನಣ್ಣ ಅವರ ಬೆಂಬಲಿಗರು, ಅಭಿಮಾನಿಗಳು ಈ ಬಗ್ಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಅವಹೇಳನಕಾರಿಯಾಗಿ ಕೀಳುಸಂದೇಶ ಹರಿಬಿಟ್ಟಿರುವ ಬೆಂಗಳೂರಿನ ಜಗನ್ನಾಥ್ ರೈ, ಮಂಜುನಾಥ್ ರಾವ್, ವೀರೇಶ್ ಎನ್.ಕೆ. (ವೀರು), ಶರತ್, ರಾಕೇಶ್, ನವೀನ್ ಇತರ ಹಲವರ
ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗಿದೆ.
ಹಾಕಿರುವ ಸಂದೇಶಕ್ಕೆ ಹಲವರು ಕಮೆಂಟ್ ಮಾಡಿದ್ದು, ಇವರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.