ವೀರಾಜಪೇಟೆ, ನ. ೧೩: ವೀರಾಜಪೇಟೆ ತಾಲೂಕು ಗೌಡ ಸಮಾಜದ ವತಿಯಿಂದ ತಾ. ೧೬ ರಂದು ಪೂರ್ವಹ್ನ ೧೧.೩೦ ಗಂಟೆಗೆ ಸಂತೋಷಕೂಟವನ್ನು ಆಯೊಜಿಸಲಾಗಿದೆ ಎಂದು ವೀರಾಜಪೇಟೆ ತಾಲೂಕು ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿರ ವಾಸು ಗಣಪತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೯೮ ರಲ್ಲಿ ಪಾರಂಭಗೊAಡ ಗೌಡ ಸಮಾಜವು ೯೫೦ ಸದಸ್ಯರನ್ನು ಒಳಗೊಂಡಿದೆ. ಸಮಾಜಕ್ಕೆ ಜಾಗ ಇಲ್ಲದ ಸಮಯದಲ್ಲಿ ಕುರುಂಜಿ ದಿ. ವೆಂಕಟರಮಣಗೌಡ ಅವರು ೭೨ ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದರು. ಈವರೆಗೆ ಜಾಗವು ಅವರ ಹೆಸರಿನಲ್ಲಿಯೇ ಮುಂದುವರೆದಿತ್ತು.
ಅವರ ನಿಧನದ ನಂತರ ಅವರ ಮಕ್ಕಳಾದ ಡಾ. ಚಿದಾನಂದಾ ಹಾಗೂ ಡಾ. ರೇಣುಕಾ ಪ್ರಸಾದ್ ಅವರುಗಳು ಜಾಗವನ್ನು ಗೌಡ ಸಮಾಜ ವೀರಾಜಪೇಟೆ ಹೆಸರಿಗೆ ದಾನಪತ್ರ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅವರುಗಳನ್ನು ಸನ್ಮಾನಿಸಲಾಗುವುದು.
ಕಟ್ಟಡ ಶಿಥಿಲಾವಸ್ಥೆಗೆ ಬಂದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸರಕಾರ ಹಾಗೂ ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.
ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಆನಂದ ಕರಂದ್ಲಾಜೆ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ರಾಜೇಶ್ ತೇನನ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೆಟ್ಟಿನೆರವನ ಚಂದ್ರಶೇಖರ್, ಕಾರ್ಯದರ್ಶಿ ಚಂಡೀರ ಸುಂದರ, ನಿರ್ದೇಶಕರುಗಳಾದ ಮೂಡಗದ್ದೆ ರಾಮಕೃಷ್ಣ, ತಡಿಯಪ್ಪನ ನರೇಂದ್ರ ಉಪಸ್ಥಿತರಿದ್ದರು.