ವೀರಾಜಪೇಟೆ, ನ. ೧೩: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ ನುಡಿ ಉತ್ಸವ ೨೦೨೫ರ ಲಾಂಛನವನ್ನು ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ. ಮದಲೈ ಮುತ್ತು ಬಿಡುಗಡೆಗೊಳಿಸಿದರು.

ಬಳಿಕ ಅವರು ಮಾತನಾಡಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗುವ ಈ ಕಾರ್ಯಕ್ರಮವು ಸಂಭ್ರಮದ ಕಾರ್ಯಕ್ರಮವಾಗಿದ್ದು ನಮ್ಮ ನಾಡಿನ ಹೆಮ್ಮೆಯ ಹಬ್ಬವು ಆಗಿದೆ. ನಮ್ಮ ನಾಡು ನುಡಿ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡ ನಾಡು ಪ್ರಾಚೀನ ಇತಿಹಾಸವನ್ನು ಹೊಂದಿದ್ದು ರಾಜ್ಯೋತ್ಸವದ ಆಚರಣೆ ನಾವು ನಾಡಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ನ ನುಡಿ ಉತ್ಸವ ಸಮಿತಿಯ ಸಂಚಾಲಕ ಅಬ್ದುಲ್ ರೆಹಮಾನ್ ಮಾತನಾಡಿ ಕನ್ನಡಮ್ಮನ ಸೇವೆಗೆ ನಾವು ಸದಾ ಸಿದ್ಧರಿರಬೇಕು. ವಿದ್ಯಾಸಂಸ್ಥೆಯಲ್ಲಿ ನುಡಿ ಉತ್ಸವ ಕಾರ್ಯಕ್ರಮದಲ್ಲಿ ಈ ಹಿಂದಿನಿAದಲೂ ಸಕ್ರಿಯವಾಗಿ ಪ್ರತಿಯೊಬ್ಬರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ್ ಮೌರ್ಯ ಕಾರ್ಯಕ್ರಮದ ಸ್ವರೂಪದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರು ನುಡಿ ಉತ್ಸವದ ವಿಡಿಯೋ ತುಣುಕನ್ನು ಬಿಡುಗಡೆಗೊಳಿಸಿದರು.

ಅಮ್ಮತ್ತಿಯ ಜಾದೂಗಾರರಾದ ರಾಜೇಶ್ ಅವರಿಂದ ಜಾದು ಪ್ರದರ್ಶನ, ಚೆನ್ನಯ್ಯನಕೋಟೆಯ ರಮೇಶ್ ಮತ್ತು ತಂಡದವರಿAದ ಕಹಳೆ ಜನಪದ ಕಲೆ ಪ್ರದರ್ಶನ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನವು ಮೂಡಿ ಬಂತು. ಕನ್ನಡ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ, ಪ್ರಾದ್ಯಾಪಕ ಶಾಂತಿಭೂಷಣ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನುಡಿ ಉತ್ಸವದ ಪ್ರಯುಕ್ತ ತಾ. ೨೦ ರಂದು ಕಾಲೇಜಿನಲ್ಲಿ ಅಂತರ ತರಗತಿ ನುಡಿ ಗೀತ ಗಾಯನ ಸ್ಪರ್ಧೆ, ಸಭಾ ಕಾರ್ಯಕ್ರಮ, ಸಾಂಪ್ರದಾಯಿಕ ದಿನ, ವಿದ್ಯಾರ್ಥಿ ಕಲಾವಿದರಿಂದ ಕಲಾಪ್ರದರ್ಶನ ಸಂಭ್ರಮದಿAದ ಜರುಗಲಿದೆ.