ಶನಿವಾರಸಂತೆ, ನ. ೧೩: ಮೈಸೂರು ದಕ್ಷಿಣ ವಲಯ ವತಿಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಆಯೋಜಿಸಿದ್ದ ೭ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ - ೨೦೨೫ ರಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ಸ್ಟೇಬಲ್ ಕೆ.ಎಂ. ಪ್ರದೀಪ್ ಕುಮಾರ್ ಪೊರ್ಟ್ ರೇಟ್ ಪಾರ್ಲೆ ಟೆಸ್ಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಅವರು ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಬೋರಲಿಂಗಯ್ಯ ಅವರಿಂದ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳಾದ ಆರ್.ಎಫ್.ಎಸ್.ಎಲ್. ಮುಖ್ಯಸ್ಥ ಚಂದ್ರಶೇಖರ್, ಸಿಟಿ ಕಮಿಷನರ್ ಸೀಮಾ ಲಾಥಕರ್, ಉಪ ಆಯುಕ್ತ ಸುಂದರರಾಜ್ ಇದ್ದರು.