ಗೋಣಿಕೊಪ್ಪ ವರದಿ, ನ. ೧೩ : ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಮಹಾಸಭೆ ವೇದಿಕೆ ಅಧ್ಯಕ್ಷ ವಿ. ಪಿ. ಡಾಲು ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಶ್ರೇಯಸ್ ವರದಿ ಮಂಡಿಸಿದರು. ಖಜಾಂಜಿ ವಿ. ಎಸ್. ಕಿರಣ್ ಲೆಕ್ಕಪತ್ರ ಮಂಡಿಸಿದರು. ಪ್ರತಿಯೊಬ್ಬ ಸದಸ್ಯರಿಗೆ ಗುರುತಿನ ಚೀಟಿ ನೀಡುವುದು, ಸಂಘದ ಬೈಲಾಪ್ರತಿಯನ್ನು ಆದಷ್ಟು ಬೇಗ ಸಿದ್ಧಪಡಿಸುವುದು, ಮಹಿಳಾ ನಿರ್ದೇಶಕರಿಗೆ ಅಧಿಕಾರ ನೀಡುವುದು, ವರ್ಷಂಪ್ರತಿ ಕೆಂಪೇಗೌಡ ಜಯಂತಿ ಆಚರಿಸುವುದು, ಕೆಂಪೇಗೌಡ ಜಯಂತಿಯ ಕೆಸರುಗದ್ದೆ ಕ್ರೀಡಾಕೂಟಕ್ಕೆ ಸಿಗುವ ಅನುದಾನವನ್ನು ಕಾರ್ಯಕ್ರಮ ಆಯೋಜಿಸುವ ಗ್ರಾಮಕ್ಕೆ ನೀಡುವುದು, ನಿರ್ದೇಶಕರು ಗ್ರಾಮದ ೧೮ ವರ್ಷ ಮೇಲ್ಪಟ್ಟ ಯುವಕರ ಸದಸ್ಯತ್ವ ಪಡೆಯುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಯಿತು.

ವೇದಿಕೆ ಅಧ್ಯಕ್ಷ ವಿ.ಪಿ. ಡಾಲು ಮಾತನಾಡಿ, ಯುವ ವೇದಿಕೆಗೆ ಆಯಾ ಗ್ರಾಮಗಳ ಸಹಕಾರ ಅಗತ್ಯ. ಕ್ರೀಡಾಕೂಟಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡಿ ಸಂಘದ ಬೆಳವಣಿಗೆಗೆ ತಾವೆಲ್ಲರೂ ಒಗ್ಗೂಡಿ ಸಹಕರಿಸಬೇಕಾಗಿ ಮನವಿ ಮಾಡಿದರು. ಆಡಳಿತ ಮಂಡಳಿಯನ್ನು ವಿಸರ್ಜಿಸಿ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಚಂದನ ಮಂಜುನಾಥ್ ನಿರೂಪಿಸಿದರು. ಮನು ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ಪಿ. ಅಜಿತ್, ಯುವ ವೇದಿಕೆಯ ಮಹಿಳಾ ನಿರ್ದೇಶಕರು ಭಾಗವಹಿಸಿದ್ದರು.