ಕೂಡಿಗೆ, ನ. ೧೩: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎನ್. ಕುಮಾರಪ್ಪ, ಉಪಾಧ್ಯಕ್ಷರಾಗಿ ಹೆಚ್.ಟಿ. ಚಂದ್ರಕಲಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊAದು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆ ಚುನಾವಣಾ ಅಧಿಕಾರಿಯಾಗಿದ್ದ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಆಯ್ಕೆಗೊಂಡಿರುವುದನ್ನು ಪ್ರಕಟಿಸಿದರು. ನಿರ್ದೇಶಕರುಗಳಾದ ಹೆಚ್.ಬಿ. ಚಂದ್ರಪ್ಪ, ಕೆ.ಎಂ. ಪ್ರಸನ್ನ, ಬಿ.ಎಂ. ಪಾರ್ವತಿ ಪ್ರಸನ್ನ, ಕೆ.ಎಸ್. ಮಂಜುನಾಥ, ಎನ್.ಸಿ. ಪೊನ್ನಪ್ಪ, ಹೆಚ್.ಕೆ. ಶರತ್, ಬಿ.ಸಿ. ಮಲ್ಲಿಕಾರ್ಜುನ, ಹೆಚ್.ಡಿ. ನಂದಕುಮಾರ್, ಡಿ.ಕೆ. ಗಂಗಾಧರ, ಹೆಚ್.ಎನ್. ಮಹಾದೇವ ಹಾಜರಿದ್ದರು. ಸಹಾಯಕ ಚುನಾವಣಾಧಿಕಾರಿ ಸುದೀಪ್, ಸಂಘದ ಕಾರ್ಯ ನಿರ್ವಹಣಾಧಿಕಾರಿ ಕೆ.ಜಿ. ಜಗದೀಶ್ ಕಾರ್ಯನಿರ್ವಹಿಸಿದರು.