ನವದೆಹಲಿ, ನ. ೧೧: ರಾಷ್ಟç ರಾಜಧಾನಿ ನವದೆಹಲಿಯ ಕೆಂಪುಕೋಟೆ ಬಳಿ ನಿನ್ನೆ ನಡೆದ ವಾಹನ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ೧೩ಕ್ಕೇರಿದ್ದು ಘಟನೆ ಸಂಬAಧ ರಾಷ್ಟಿçÃಯ ತನಿಖಾ ದಳ ತನಿಖೆ ಪ್ರಾರಂಭಿಸಿದೆ. ನಿನ್ನೆ ಸಂಜೆ ೬:೫೨ರ ವೇಳೆ ಸ್ಫೋಟಗೊಂಡ ಹ್ಯೂಂಡಯ್ ಐ.೨೦ ವಾಹನವು ಇತರ ೬ ವಾಹನಗಳು ಸೇರಿದಂತೆ ೨ ಆಟೋ ರಿಕ್ಷಾಗಳನ್ನೂ ಭಸ್ಮಗೊಳಿಸಿತು. ಘಟನೆಯಲ್ಲಿ ೮ ಮಂದಿ ಮೃತರಾಗಿದ್ದು ೨೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಗಾಯಗೊಂಡ ೫ ಮಂದಿ ಇಂದು ಮೃತರಾಗಿದ್ದು, ಒಟ್ಟು ಸಂಖ್ಯೆ ೧೩ಕ್ಕೇರಿದೆ. ಇದುವರೆಗೆ ೪ ಮಂದಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಪುಲ್ವಾಮ ನಿವಾಸಿ ಜೈಶ್ ಇ ಮಹಮ್ಮದ್
ಉಗ್ರಗಾಮಿಯ ವಾಹನ ಶಂಕೆ
ಸ್ಫೋಟಗೊಂಡ ಐ೨೦ ವಾಹನ ಮೇಲ್ನೋಟಕ್ಕೆ ಪುಲ್ವಾಮ ನಿವಾಸಿ ಡಾ.ಉಮರ್ ಅವನದ್ದು ಎಂಬುದಾಗಿ ತಿಳಿದುಬಂದಿದೆ. ವಾಹನಕ್ಕೆ ಈ ಹಿಂದೆ ಹಲವಾರು ಮಾಲೀಕರು ಇದ್ದ ಕಾರಣ ಈ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಹೇಳಿಕೆ ಅಧಿಕಾರಿಗಳಿಂದ ಬರಬೇಕಿದೆ. ೧೦೦ಕ್ಕೂ ಅಧಿಕ ಸಿ.ಸಿ.ಟಿ.ವಿ ಗಳನ್ನು ಪರಿಶೀಲನೆ ನಡೆಸಿರುವ ದೆಹಲಿ ಪೊಲೀಸರು, ಸ್ಫೋಟವಾಗುವ ಕೆಲ ಕ್ಷಣಗಳ ಹಿಂದೆ ವಾಹನವನ್ನು ಉಮರ್ ಓಡಿಸುತ್ತಿದ್ದ ಎಂಬುದಾಗಿಯೂ ಹೇಳಿದ್ದಾರೆ. ಸ್ಫೋಟಗೊಂಡ ಸಂದರ್ಭ ವಾಹನವು ಸಿಗ್ನಲ್ ಲೈಟ್‌ವೊಂದರ ಸಮೀಪ ನಿಧಾನವಾಗಿ ಚಲಿಸುತ್ತಿದ್ದು ಈ ಸಂದರ್ಭ ಉಮರ್ ಕೂಡ ವಾಹನದಲ್ಲೇ ಇದ್ದುದ್ದಾಗಿಯೂ ಮೇಲ್ನೋಟಕ್ಕೆ ತಿಳಿದುಬಂದಿದೆ. ನವದೆಹಲಿ ಬಳಿಯ ಫರಿದಾಬಾದ್‌ನಲ್ಲಿ ನಿನ್ನೆ ಅಷ್ಟೆ ಉಗ್ರಗಾಮಿ ಜೈಶ್-ಇ-ಮಹಮದ್ ಸಂಘಟನೆ ಸದಸ್ಯರಿಂದ ಜಮ್ಮು ಹಾಗೂ ದೆಹಲಿ ಪೊಲೀಸರು ೩೫೦ ಕೆ.ಜಿ ಸ್ಫೋಟಕಗಳು, ಹಲವು ಶಸ್ತಾçಸ್ತçಗಳನ್ನು ವಶಪಡಿಸಿಕೊಂಡಿಸಿದ್ದರು. ಇದೇ ಸಂಘಟನೆಗೆ ಉಮರ್ ಸೇರಿದ್ದಾಗಿಯೂ ದೆಹಲಿ ಪೊಲೀಸ್ ಮೂಲಗಳು ಕೆಲ ಮಾಧ್ಯಮಗಳಿಗೆ ಹೇಳಿಕೆ ನೀಡಿವೆ. ಅಮೋನಿಯಮ್ ನೈಟ್ರೇಟ್ ಫ್ಯೂಲ್ ಆಯಿಲ್ ಅನ್ನು ಸ್ಫೋಟಕವಾಗಿ ಬಳಸಿದ್ದಾಗಿ ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.