ಕಣಿವೆ, ನ. ೧೧: ಮುಂಬರುವ ೨೦೨೬ ಹಾಗೂ ೨೦೨೭ ರ ಸಾಲಿನಲ್ಲಿ ೩೫೦೦ ಅಭ್ಯರ್ಥಿಗಳನ್ನು ಸೇನೆಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಕೊಡಗಿನ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಕೊಡಗು ಜಿಲ್ಲೆಯ ಅರೆ ಸೇನಾಪಡೆ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ನಿರ್ದೇಶಕ ಜಿ.ಕೆ. ದಿನೇಶ್ ಕುಮಾರ್ ಸಂಚಾಲಕ ನೂರೆರ ಭೀಮಯ್ಯ ಅವರುಗಳು, ಸೇನಾ ವಿಭಾಗದ ಅಸ್ಸಾಂ ರೈಫಲ್, ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ ಹಾಗೂ ಎಸ್‌ಎಸ್‌ಬಿಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಯುವಕರು ಈಗಿನಿಂದಲೇ ತಯಾರಿ ನಡೆಸಿಕೊಳ್ಳಬೇಕು ಎಂದು ಕೋರಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಅರೆ ಸೇನಾಪಡೆಯಲ್ಲಿ ಸೇವೆ ಮಾಡಿ ನಿವೃತ್ತರಾದವರು ಹಾಗೂ ಹಾಲಿ ಸೇವೆಯಲ್ಲಿರುವ ಯೋಧರು ಸುಮಾರು ನಾಲ್ಕು ಸಾವಿರ ಸಂಖ್ಯೆಗೂ ಹೆಚ್ಚಿದ್ದಾರೆ. ಕಳೆದ ೧೩ ವರ್ಷಗಳ ಹಿಂದೆ ಮಡಿಕೇರಿ ಮಹದೇವಪೆಟೆಯಲ್ಲಿ ಅರೆಸೇನಾಪಡೆಯ. ನಿವೃತ್ತ ಯೋಧರ ಸಂಘದ ಕಚೇರಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿದೆ. ಸೇನೆ ಸೇರಬಯಸುವ ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್ ೯೪೪೮೪೭೫೧೫೬ ನಿರ್ದೇಶಕ ಜಿ.ಕೆ. ದಿನೇಶ್ ಕುಮಾರ್ ೯೭೪೧೨೦೧೭೧೭, ಸಂಚಾಲಕ ನೂರೆರಾ ಭೀಮಯ್ಯ ೯೪೮೧೦೫೭೮೬೮ ಅವರನ್ನು ಸಂಪರ್ಕಿಸುವAತೆ ದಿನೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.