ಮಡಿಕೇರಿ, ನ. ೧೨: ೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ವತಿಯಿಂದ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಫ್.ಎಂ.ಸಿ. ಕಾಲೇಜು ಉಪನ್ಯಾಸಕಿ ಡಾ. ಮಹಾಲಕ್ಷಿö್ಮ ಟಿ.ಎಸ್. ಆಗಮಿಸಿ ಕನ್ನಡ ನಾಡು - ನುಡಿಯ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ನಿರ್ಮಲ ಹೆಚ್.ಪಿ. ಅವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಅಬೀಬ್ ಅಹಮ್ಮದ್, ಪ್ರೇಮ ನಿಂಗಪ್ಪ, ರಿಯಾಜ್ ಉದ್ದೀನ್ ಹಾಗೂ ಬೋಧಕರುಗಳಾದ ಡಾ. ವೇಣುಗೋಪಾಲ್, ರಾಖಿ ಪೂವಣ್ಣ, ಮುದ್ದಪ್ಪ ಕೆ.ಎಂ., ಉದಯಕುಮಾರ ಹಾಜರಿದ್ದರು.