ಕೂಡಿಗೆ, ನ. ೧೨: ಸೈನಿಕ ಶಾಲೆ ೯ನೇ ತರಗತಿಯ ವಿದ್ಯಾರ್ಥಿಗಳಾದ ಧ್ರುವ ವಿ. ಭಾರದ್ವಾಜ್ ಹಾಗೂ ಅಚಲ್ ಥೇನುವಾ ಭಾರತೀಯ ನೌಕಾಪಡೆಯ ಪ್ರತಿಷ್ಠಿತ ಸ್ಪರ್ಧೆಗಳಲ್ಲೊಂದಾದ ರಾಷ್ಟಿçÃಯಮಟ್ಟದ ಕ್ವಿಜ್ ಸ್ಪರ್ಧೆಯಾದ “ಥಿನ್ಕೂö್ಯ-೨೦೨೫ನ ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ.
ಕೇರಳದ ಎಝಿಮಲಾದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ಸ್ಪರ್ಧೆ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ನೌಕಾ ಅಕಾಡೆಮಿಯ ಕಮಾಂಡAಟ್ ವೈಸ್ ಅಡ್ಮಿರಲ್ ಮನೀಷ್ ಚಡ್ಡಾ ಅವರಿಂದ ಗೌರವ ಹಾಗೂ ಬಹುಮಾನ ಪಡೆದರು. ಯುವ ಸಾಧಕರು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಅಪರೂಪದ ಅವಕಾಶವನ್ನು ಪಡೆದರು.
ಶಾಲೆಯ ವಿಜ್ಞಾನ ಶಿಕ್ಷಕ ದಾದಾ ಧರೆಪ್ಪ ಕುಸನಾಳೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಇದು ಸೈನಿಕ ಶಾಲೆ ಕುಟುಂಬದ ಎಲ್ಲರಿಗೂ ಹೆಮ್ಮೆಯ ಕ್ಷಣವಾಗಿದ್ದು, ರಾಷ್ಟಿçÃಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳ ಈ ಸಾಧನೆ ಅವರ ಶಿಸ್ತಿನ, ತ್ಯಾಗದ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.