ಗೋಣಿಕೊಪ್ಪ ವರದಿ, ನ. ೧೧: ಮೈಸೂರು ಚಾಮುಂಡಿ ವಿಹಾರ್ ಸ್ಟೇಡಿಯಂನಲ್ಲಿ ೧೪ ವರ್ಷ ಮೇಲ್ಪಟ್ಟವರಿಗೆ ನಡೆದ ರಾಷ್ಟç ಮಟ್ಟದ ಶಿಟರ್ಯು ಕರಾಟೆ ಚಾಂಪಿಯನ್ಶಿಪ್ನಲ್ಲಿ ಗೋಣಿಕೊಪ್ಪ ಲಯನ್ಸ್ ಮತ್ತು ಕಾಪ್ಸ್ ಶಾಲೆಯ ೨೦ ಕರಾಟೆಪಟುಗಳು ೨೪ ಪದಕ ಸಾಧನೆ ಮಾಡಿದ್ದಾರೆ.
ಕೆ.ಬಿ. ತಶನ್ ನಂಜಪ್ಪ ಕಟಾ, ಕಟಾ ತಂಡ, ಕುಮಿತೆ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಕೆ.ಬಿ. ತನಿಕ ಕಟಾದಲ್ಲಿ ಕಂಚು, ಕುಮಿತೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡರು. ಕೆ.ಬಿ. ತ್ರಿಷಾ ದೇಚಮ್ಮ ಕಟಾದಲ್ಲಿ ಕಂಚು, ಕುಮಿತೆಯಲ್ಲಿ ಚಿನ್ನ ಪಡೆದರು. ಎಂ.ಎA. ಇರಾ ಚೋಂದಮ್ಮ ಕಟಾದಲ್ಲಿ ಕಂಚು, ಕುಮಿತೆಯಲ್ಲಿ ಕಂಚು ಸಾಧನೆ ಮಾಡಿದರು. ದ್ರಾವಿಡ್ ಪೊನ್ನಣ್ಣ ಕಟಾದಲ್ಲಿ ಕಂಚು, ಪ್ರವರ್ಥ್ ಪೂವಣ್ಣ ಕಟಾದಲ್ಲಿ ಚಿನ್ನ, ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ನವನೀತ್ಗೆ ಕಂಚು, ಕಟಾದಲ್ಲಿ ವಿಷ್ಣುಗೆ ಕಟಾದಲ್ಲಿ ಕಂಚು, ಎಂ.ಪಿ. ಶೃದ್ದಾಗೆ ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ಕಂಚು, ರಾಹುಲ್ ಪೂವಣ್ಣಗೆ ಕಟಾದಲ್ಲಿ ಕಂಚು, ಮನ್ವಿತಾಗೆ ಬೆಳ್ಳಿ, ಕಂಚು, ಪ್ರನನ್ಯಗೆ ಬೆಳ್ಳಿ, ಕಂಚು, ವೀರು ೨ ಕಂಚು, ಯುಕ್ತಿಗೆ ಬೆಳ್ಳಿ ಮತ್ತು ಕಂಚು ಪದಕ ದೊರೆಯಿತು.
ತರಬೇತುದಾರ ಜಮ್ಮಡ ಜೋಯಪ್ಪ, ಮೂಡಗದ್ದೆ ಸುಮನ್, ಕಾರ್ತಿಕ್ ದೇವಯ್ಯ ತರಬೇತಿ ನೀಡಿದ್ದಾರೆ.