ವೀರಾಜಪೇಟೆ, ನ. ೧೨: ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಜಗತ್ತಿನಲ್ಲಿ ಶಾಂತಿ ಉದಯಿಸಲು ಶಿಕ್ಷಣದ ಪಾತ್ರ ಮಹತ್ವವಾದದ್ದು. ಆದ್ದರಿಂದ ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಲೇಖಕಿ ಕೆ.ಟಿ. ವಾತ್ಸಲ್ಯ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ - ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೩೭ನೇ ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಶಿಕ್ಷಣದ ಅಸ್ತç ಲೇಖನಿಯಿಂದ ಮಾತ್ರ ಸಾಧ್ಯ. ಭಾರತ ದೇಶ ವಿಶೇಷವಾದ ಸಂಸ್ಕೃತಿಯನ್ನು ಹೊಂದಿದೆ. ನಾವೆಲ್ಲರೂ ಮಾನವರು. ವಿಶ್ವ ಯುದ್ಧವನ್ನು ಲೇಖನಿಯಿಂದ ವಿಶ್ವಕ್ಕೆ ಉತ್ತರಿಸೋಣ. ಜ್ಞಾನದ ಸ್ಫೋಟ ಪಸರಿಸೋಣ, ಭಯೋತ್ಪದಾನೆಯನ್ನು ಬೇರುಸಮೇತ ಕಿತ್ತು ಹಾಕೋಣ ಎಂದರು.
ಲೇಖನಿ ಅಭಿಯಾನ ನಡೆಸುತ್ತಿದ್ದು, ಪೇಪರ್ನಿಂದ ೬,೮೦೦ ಲೇಖನಿಗಳನ್ನು ತಯಾರಿಸಲಾಗಿದೆ ಎಂದ ಲೇಖಕಿ ವಾತ್ಸಲ್ಯ ಅವರು, ಪ್ರತಿಯೊಬ್ಬರು ದಿನನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸುವಂತಾಗಲಿ ಎಂದರು.
ಮೊದಲಿಗೆ ಕೃಷಿಕರಾದ ಆಶಾ ತಿಮ್ಮಪ್ಪಯ್ಯ ಅವರು ಜೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ ವರ್ಷಗಳಿಂದ ಶ್ರೀ ಮಠದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಹೊಂಬೆಳಕು ಕಾರ್ಯಕ್ರಮ ಜನರ ಮನಸ್ಸನ್ನು ಪರಿವರ್ತಿಸಿದೆ. ಮುಂದೆಯೂ ಉತ್ತಮ ಕಾರ್ಯಗಳು ನಡೆಯುವಂತಾಗಲಿ ಎಂದರು.
ಅರಮೇರಿ - ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ದೇಶ ಕೊಟ್ಟಂತ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮಕ್ಕಳಿಗೆ ಸಮರ್ಪಕವಾದಂತಹ ಶಿಕ್ಷಣ ಅಗತ್ಯವಿದೆ. ಲೇಖನಿಗೆ ಅದ್ಭುತವಾದಂತಹ ಶಕ್ತಿ ಇದೆ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದರು.
ಎಲ್ಲೆಂದರಲ್ಲಿ ಕಸವನ್ನು ಹಾಕಬೇಡಿ. ಪ್ರತಿಯೊಬ್ಬರು ಭೂಮಿಯನ್ನು ಸ್ವಚ್ಛತೆಯಿಂದ ಸುಂದರವಾಗಿ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾಂತಿ ಸತೀಶ್, ಕೃಷಿಕರಾದ ತಿಮ್ಮಪ್ಪಯ್ಯ, ನಿವೃತ್ತ ಶಿಕ್ಷಕರಾದ ಲಕ್ಷಿö್ಮÃ ನಾರಾಯಣ, ವೀರಾಜಪೇಟೆ ವೈದ್ಯರಾದ ಡಾ. ನರಸಿಂಹನ್ ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಸುಶ್ಮಿತಾ ಪ್ರಸಾದ್ ಸ್ವಾಗತಿಸಿದರು, ಕೆ.ಬಿ. ಇಂಪನ ನಿರೂಪಿಸಿದರೆ, ಎಸ್.ಎಸ್. ಚೈತ್ರಾ ವಂದಿಸಿದರು.