ಮಡಿಕೇರಿ, ನ. ೮ : ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ವತಿಯಿಂದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಆವರಣದಲ್ಲಿ ೫೦ನೇ ವರ್ಷದ ಸುವರ್ಣ ಸಂಭ್ರಮದ ದಸರಾ ಉತ್ಸವ ಮೂರ್ತಿಗಳಿಗೆ ಶಾಂತಿ ಪೂಜೆಯಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಕಲಾವತಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ. ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್, ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ಅಧ್ಯಕ್ಷ ಬಿ.ಕೆ ಜಗದೀಶ್, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್, ಸ್ಥಾಪಕ ಸದಸ್ಯ ಗಿಲ್ಬರ್ಟ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರಗ ಸಮಿತಿಯ ಅರ್ಚಕರುಗಳನ್ನು, ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಗೌರವಾಧ್ಯಕ್ಷರುಗಳನ್ನು ಹಾಗೂ ದೇವಾಲಯಕ್ಕೆ ಈ ಹಿಂದೆ ದುಡಿದಂತಹ ಹಿರಿಯರನ್ನು ಸನ್ಮಾನಿಸಲಾಯಿತು.
ಅಲ್ಲದೆ ೧೦ ಮಂಟಪಗಳ ಅಧ್ಯಕ್ಷರುಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸಂಜೆ ಉತ್ಸವ ಮೂರ್ತಿಗಳಿಗೆ ಶಾಂತಿಪೂಜೆಯನ್ನು ನೆರವೇರಿಸಲಾಯಿತು. ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ವಿತರಿಸಲಾಯಿತು. ಮುದ್ದುರಾಜ್ ಸ್ವಾಗತಿಸಿ, ಜಿ.ಎಸ್. ಮಂಜುನಾಥ್, ಪಿ.ಜಿ. ಮಂಜುನಾಥ್ ನಿರೂಪಿಸಿದರು.
ಸಂತೋಷ್ ನಾಗರಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಿತ್ರಮಂಡಳಿಯ ಸರ್ವ ಸದಸ್ಯರು ಭಾಗವಹಿಸಿದ್ದರು. ನಗರದ ಫೈವ್ ಸ್ಟಾರ್ ತಂಡದಿAದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.
ಮಂಟಪಕ್ಕೆ ಈ ಹಿಂದೆ ಬಹುಮಾನ ರೂಪದಲ್ಲಿ ಬಂದAತಹ ಚಿನ್ನದ ನಾಣ್ಯಗಳಲ್ಲಿ ಶ್ರೀ ದೇವಿಗೆ ಸುಮಾರು ೩೬.೫ ಗ್ರಾಂ ತೂಕದ ಚಿನ್ನದ ಮಾಲೆಯನ್ನು ದಸರಾದಂದು ಸಮರ್ಪಿಸಲಾಗಿತ್ತು.