ಮಡಿಕೇರಿ, ನ. ೭: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಧಾತ್ರಿ ಹೋಮ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಜರುಗಿದ ಪೂಜಾ ಕೈಂಕರ್ಯಗಳಲ್ಲಿ ಕುಶಾಲನಗರ ವ್ಯಾಪ್ತಿಯ ಆರ್ಯ ವೈಶ್ಯ ಸಮುದಾಯದ ನೂರಾರು ಮಂದಿ ಪಾಲ್ಗೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಕಾರ್ತಿಕ ಮಾಸದಲ್ಲಿ ಪವಿತ್ರವಾದ ನಿಂಬೆ ಮತ್ತು ತುಳಸಿಗೆ ವಿವಾಹದ ದೈವಿಕ ಕೈಂಕರ್ಯದ ಧಾತ್ರಿ ಹೋಮಹವನಾದಿಗಳನ್ನು ಅರ್ಚಕರಾದ ಗಿರೀಶ್ ಭಟ್, ಯೋಗೇಶ್ ಭಟ್, ಕೃಷ್ಣಮೂರ್ತಿ ಭಟ್ ನಡೆಸಿಕೊಟ್ಟರು. ಇದೇ ಸಂದರ್ಭ ತುಳಸಿ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.

ಕುಶಾಲನಗರ ಆರ್ಯ ವೈಶ್ಯ ಮಂಡಳಿ, ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯ ವೈಶ್ಯ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ, ಪ್ರಮುಖರಾದ ಬಿ.ಎಲ್. ಸತ್ಯನಾರಾಯಣ, ಬಿ.ಆರ್. ನಟರಾಜ್, ಪಿ.ಎಸ್. ಪ್ರಶಾಂತ್, ಎಸ್.ಎನ್. ನಾಗೇಂದ್ರ, ಬಿ.ಎಲ್. ಅಶೋಕ್ ಕುಮಾರ್, ಕೆ.ಜೆ. ಸತೀಶ್, ಬಿ.ಎನ್.ವಸಂತ್ ಕುಮಾರ್, ಪಿ.ಪಿ. ಸತ್ಯನಾರಾಯಣ, ಕೆ.ಜೆ.ನಾಗೇಂದ್ರ, ಬಿ.ಎಲ್. ಉದಯಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್ ಪಾಲ್ಗೊಂಡಿದ್ದರು.