ನಾಪೋಕ್ಲು, ನ. ೭: ಅವಂದೂರು ಗೋಪಾಲಕೃಷ್ಣ ಯುವ ಸಂಘ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಎರಡನೇ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನೆರವೇರಿತು.
ಅವಂದೂರು ಗ್ರಾಮದ ಊರಂಬಲ ಬಳಿಯ ಮದೆ ಪಂಚಾಯಿತಿ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಕೆದಂಬಾಡಿ ಎಸ್. ಪುಟ್ಟಯ್ಯ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ದೇವಾಯಿರ ಕೀರ್ತನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಸಭಾಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸಿ ಮಾತನಾಡಿ, ಅವಂದೂರು ಎಂಬ ಸಣ್ಣ ಗ್ರಾಮದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿ ಗುಂಡು ಹೊಡೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ. ಎಲ್ಲ ಗ್ರಾಮದಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು. ದೇಶ ಸೇವೆ ಮಾಡಿದ ಸೈನಿಕರಿಗೆ ಸನ್ಮಾನ ಕಾರ್ಯ ಹೆಮ್ಮೆ ಎಂದು ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೋವಿ ಎಂಬುದು ಕೊಡಗಿನ ಜನರ ಅವಿಭಾಜ್ಯ ಅಂಗವಾಗಿದ್ದು, ಹುಟ್ಟು ಮತ್ತು ಸಾವು ಎರಡರಲ್ಲೂ ಉಪಯೋಗಿಸುತ್ತಿದ್ದು ಕೋವಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಅವಂದೂರು ಗ್ರಾಮ ಪಂಚಾಯಿತಿ ಸದಸ್ಯರಾದಊರೋಲನ ತೇಜಕುಮಾರ್, ದೇವಾಯಿರ ಮೋಹಿನಿ ರಾಘವಯ್ಯ ಹಾಗೂ ದಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರಿಗೆ ಯುವಕ ಸಂಘ ಹಾಗೂ ಗ್ರಾಮಸ್ಥರ ಪರವಾಗಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು.
.೨೨ ರೈಫಲ್ ಶೂಟಿಂಗ್, ೧೨ನೇ ಬೋರ್ ತೋಟದ ಕೋವಿ, ಏರ್‌ಗನ್‌ನಲ್ಲಿ ಮೊಟ್ಟೆಗೆ ಹೊಡೆಯುವುದು ಈ ಮೂರು ವಿಭಾಗದಲ್ಲಿ ಸ್ಪರ್ಧೆಗಳು ಜರಗಿತು. ಈ ಸಂದರ್ಭ ನುರಿತ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ವಿಜೇತÀರು: .೨೨ ರೈಫಲ್ ವಿಭಾಗ : ಪ್ರಥಮ ಪ್ರವೀಣ್ ಮಿತ್ತೂರು, ದ್ವಿತೀಯ ಬೋಪಣ್ಣ ಮಣವಟ್ಟಿರ, ತೃತೀಯ ನಾಸಿರ್ ಪೊನ್ನಂಪೇಟೆ.
೧೨ನೇ ಬೋರ್: ಪ್ರಥಮ ನಂಜಪ್ಪ ಮಂಡಿರ, ದ್ವಿತೀಯ ಕರಣ್ ವಿ. ಎಸ್., ತೃತೀಯ ವಿಹಾನ್ ದೇವಯ್ಯ ಮಂದಪAಡ.
ಏರ್‌ಗನ್: ಪ್ರಥಮ ಚಿರಂತ್ ಡಿ., ದ್ವಿತೀಯ ಶರತ್ ಕಬ್ಬಚ್ಚೀರ, ತೃತೀಯ ಶ್ಯಾಮ್ ಕನ್ನಿಕಂಡ.