ಮಡಿಕೇರಿ, ನ. ೮: ಬಿಲ್ಲವ ಸಮಾಜ ಸೇವಾ ಸಂಘ ಮಡಿಕೇರಿ ವತಿಯಿಂದ ನಗರದ ಬಾಲಭವನದಲ್ಲಿ ಸಂಘದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ಅಧ್ಯಕ್ಷತೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್. ಲಿಂಗಪ್ಪ ಪೂಜಾರಿ ಉದ್ಘಾಟಿಸಿ ಶ್ರೀ ನಾರಾಯಣ ಗುರುಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದರು. ನಂತರ ಮಾತನಾಡಿದ ಅವರು ನಾವುಗಳು ನಮ್ಮ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಕುಲಬಾಂಧವರನ್ನು ಸಂಘಟಿಸಬೇಕು ಹಾಗೂ ಪ್ರತಿ ಸದಸ್ಯರಿಗೂ ಸಂಘದ ಮೇಲೆ ಅಭಿಮಾನವಿರಬೇಕು ಎಂದರು.

ಬ್ರಹ್ಮ ಶ್ರೀ ನಾರಾಯಣಗುರುಗಳ ಬಗ್ಗೆ ಉಪನ್ಯಾಸ ನೀಡಿದ ಬಿ.ಎನ್. ರಮೇಶ ಅವರು ಮಾತನಾಡಿ ಜೀವನದಲ್ಲಿ ಅದೃಷ್ಟವನ್ನು ಬಯಸುವುದು ಮುರ್ಖತನ, ಶ್ರಮ ಪಟ್ಟರೆ ಮಾತ್ರ ಜೀವನದಲ್ಲಿ ಮುಂದೆ ಬರಲುಸಾಧ್ಯ. ಬ್ರಹ್ಮ ಶ್ರೀ ನಾರಾಯಣಗುರುಗಳ ಜೀವನ ಚರಿತ್ರೆಯ ಬಗ್ಗೆ ತಿಳಿಸಿದರು.

ಅಂತರರಾಷ್ಟಿçÃಯ ಹಾಕಿ ತರಬೇತುದಾರರಾದ ಅಂಕಿತಾ ಸುರೇಶ್ ಮಾತನಾಡಿ ನಾವು ಯಾವುದೇ ಮಟ್ಟಕ್ಕೇ ಬೆಳೆದರೂ ಹಿಂದಿನದ್ದನ್ನೂ ಮರೆಯಬಾರದು. ಏಕಾಗ್ರತೆ ಸತತ ಪ್ರಯತ್ನವಿದ್ದರೆ ಸಾಧನೆ ಮಾಡಬಹುದೆಂದರು. ಇದೇ ಸಂದರ್ಭ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲೀಲಾವತಿ ಮಾತನಾಡಿ, ಸಂಘವು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿ ಸಂಘಕ್ಕೆ ನಿವೇಶ ಮಂಜೂರಾಗಿರುವ ಬಗ್ಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ನಿವೇಶನದಲ್ಲಿನ ಕಾಮಗಾರಿಗಳಿಗೆ ಸಹಕಾರ ನೀಡಬೇಕೆಂದರು. ವೇದಿಕೆಯಲ್ಲಿ ಮಡಿಕೇರಿ ನಗರಠಾಣೆ ಎ.ಎಸ್.ಐ ಬಿ.ಎಂ. ರಾಮಪ್ಪ, ಎಸ್.ಬಿ.ಐ ನಿವೃತ್ತ ವ್ಯವಸ್ಥಾಪಕರಾದ ಬಿ.ಬಿ ರಮೇಶ್ ಯೋಗಪಟು ಸಿಂಚನಾ ಉಪಸ್ಥಿತರಿದ್ದರು. ಬಿ.ಎಂ ಚರಿತಾ ಪ್ರಾರ್ಥಿಸಿ, ಬಿ.ಕೆ. ಮಹೇಶ್ ಸ್ವಾಗತಿಸಿದರು. ಬಿ.ಎಸ್ ಜಯಪ್ಪ ಕಡಗದಾಳು ನಿರೂಪಿಸಿದರು. ಮನೋಹರ ವಂದಿಸಿದರು. ಇದೇ ಸಂದರ್ಭ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಹಾಗೂ ಮಹಿಳೆಯರಿಗೆ ಹೂವುದಾನಿ ಸ್ಪರ್ಧೆ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಮಡಿಕೇರಿ ಬಿಲ್ಲವ ಸಮಾಜ ಸೇವಾ ಸಂಘದ ೨೦೨೪-೨೫ ನೇ ಸಾಲಿನ ಮಹಾಸಭೆ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆಯಿತು.