ಮಡಿಕೇರಿ, ನ. ೮: ಇದೊಂದು ಅತ್ಯಂತ ಸವಾ ಲಿನ ಭಾರೀ ಕ್ಲಿಷ್ಟಕರವಾದ ಒಂದು ಅಮೋಘ ಪ್ರಯತ್ನ. ಇದನ್ನು ಮಾಡಿರುವುದು ಯಾವುದೇ ಇಲಾಖೆ ಅಥವಾ ಸರಕಾರಗಳಲ್ಲ... ಬದಲಾಗಿ ಕೇವಲ ಬೆರಳೆಣಿಕೆಯ ಯುವಕ - ಯುವತಿಯರ ತಂಡ ನಡೆಸಿರುವ ಪ್ರಯತ್ನ ಇದಾಗಿದೆ.
ಕೊಡಗಿನ ಮೂಲ ನಿವಾಸಿಗಳಲ್ಲಿ ಪ್ರಮುಖ ಜನಾಂಗವಾಗಿರುವ ಕೊಡವ ಜನಾಂಗಕ್ಕೆ ಸಂಬAಧಿ ಸಿದ ಸಮಗ್ರವಾದ ಚಿತ್ರಣಗಳಿರುವ ಅತ್ಯಂತ ಸೂಕ್ಷö್ಮವಾದ ಮಹತ್ವಪೂರ್ಣ ದಾಖಲೆಗಳು ಇತಿಹಾಸ... ಈಗಿನ ವಾಸ್ತವ ಭವಿಷ್ಯದ ದಿನಗಳಿಗೆ ದಿಕ್ಸೂಚಿಯಂತಿರುವ ಬಹುತೇಕ ಎಲ್ಲಾ ಅಂಶಗಳನ್ನು ಒಳಗೊಂಡAತಹ ಸಮೀಕ್ಷೆಯೊಂದನ್ನು ‘‘ಕನೆಕ್ಟಿಂಗ್ ಕೊಡವಾಸ್’’ ಸಂಘಟನೆ ಸಿದ್ಧಪಡಿಸಿದೆ.
೨೦೧೭ನೇ ಇಸವಿಯಲ್ಲಿ ಸಂಘಟನೆಯ ಯುವ ಮುಖಂಡರಾದ ಶಾಂತೆಯAಡ ನಿರನ್ ನಾಚಪ್ಪ ನೇತೃತ್ವದಲ್ಲಿ ಈ ಸಾಹಸಮಯ ಪ್ರಯತ್ನಕ್ಕೆ ಕೈ ಹಾಕಿದ್ದ ಈ ತಂಡ ಇದೀಗ ಜನಾಂಗದ ಆಗು - ಹೋಗಿನ ವಿವರಗಳೆಲ್ಲವನ್ನು ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದೆ.
ಇರುವ ಕೊಡವ ಕುಟುಂಬಗಳೆಷ್ಟು
ಮೂಲನೆಲೆಯಲ್ಲಿ ಇಂದಿನ ಜನಸಂಖ್ಯೆ ಈಗಿನ ಜನಸಂಖ್ಯೆ ಹಿಂದೆ ಇದ್ದ ಆಸ್ತಿ - ಪಾಸ್ತಿಗಳು ಪರಭಾರೆ, ಮದುವೆ, ಅಂತರ್‌ಜಾತಿ ವಿವಾಹ, ಸೇನೆಯಲ್ಲಿ ಸೇವೆ, ಕ್ರೀಡಾಸಾಧನೆ ಸೇರಿದಂತೆ ಇನ್ನಿತರ ಎಲ್ಲಾ ರಂಗಗಳಲ್ಲಿನ ಸೇವೆ, ನಾಡ್‌ಗಳ ವಿವರ, ನಾಡ್‌ಗಳ ಗಡಿ, ಅಡಗಿರುವ ಮನೆತನ, ತಕ್ಕಾಮೆಯ ವಿವರಗಳು ಸಂಸ್ಕೃತಿ, ಆಚಾರ - ವಿಚಾರ, ಆಭರಣಗಳು, ಐನ್‌ಮನೆ, ಮಂದ್ - ಮಾನಿ, ದೇವನೆಲೆಗಳು ಆಚರಣೆಗಳು, ಪಾಳುಬಿದ್ದ ಪ್ರದೇಶ, ಕೃಷಿ ಸಂಬAಧಿತ ವಿಚಾರ ಪುನಶ್ಚೇತನದ ಹಾದಿ ಸೇರಿದಂತೆ ಬಹುತೇಕ ಎಲ್ಲಾ ಅಂಶಗಳನ್ನು ಈ ಸಂಘಟನೆಯ ಆಸಕ್ತ ಯುವಕರು ಪ್ರತಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ವಿವರಗಳನ್ನು ಕ್ರೋಢೀಕರಿಸಿದೆ.
ಬಹುಶಃ ಯಾವುದೇ ಇಲಾಖೆಗಳು, ಸರಕಾರಗಳು ಕೂಡ ಮಾಡಲು ಕಷ್ಟ ಸಾಧ್ಯವಾದಂತಹ ಈ ವಿವರಗಳನ್ನು ಕನೆಕ್ಟಿಂಗ್ ಕೊಡವಾಸ್ ಸಂಗ್ರಹ ಮಾಡಿದೆ. ಇದೀಗ ಈ ಎಲ್ಲಾ ಕ್ರೋಢೀಕೃತ ಮಾಹಿತಿಗಳ ವಿವರಗಳನ್ನು ಮತ್ತೊಮ್ಮೆ ದೃಢೀಕರಿಸಿಕೊಳ್ಳಲಾಗುತ್ತಿರುವ ಅಂತಿಮ ಹಂತದ ಪ್ರಯತ್ನ ನಡೆದಿದೆ.
ಫೆಬ್ರವರಿಯಲ್ಲಿ ಕಾರ್ಯಕ್ರಮ
ಪ್ರಸ್ತುತ ಸಿದ್ಧಪಡಿಸಲಾಗಿರುವ ಅತ್ಯಂತ ಮಹತ್ವದ್ದು ಎನ್ನಲಾಗುತ್ತಿರುವ ಈ ದಾಖಲೆಯನ್ನು ಸಾರ್ವತ್ರಿಕವಾದ ಕಾರ್ಯಕ್ರಮವೊಂದನ್ನು ಆಯೋಜಿಸಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
೨೦೨೬ರ ಫೆಬ್ರವರಿಯಲ್ಲಿ ಬಹುಶಃ ಮೊದಲ ವಾರ ವೀರಾಜಪೇಟೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಸಂಗ್ರಹಿತ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು, ವೆಬ್‌ಸೈಟ್‌ನಲ್ಲಿ ದಾಖಲೆ ಮಾಡಿ ಬಿಡುಗಡೆಗೊಳಿಸಿವುದು ವೀಡಿಯೋ ಸಹಿತವಾದ ಹಾಗೂ ಪೂರಕ ಚಿತ್ರಗಳುಳ್ಳ ದಾಖಲೆಗಳ ಮೂಲಕ ಇದನ್ನು ಸಮಾಜಕ್ಕೆ ನೀಡುವ ಚಿಂತನೆ ಇದಾಗಿದೆ.
ಈ ಪ್ರಯತ್ನಕ್ಕೆ ಸಂಘಟನೆ ಈಗಾಗಲೇ ಸುಮಾರು ರೂ. ೧೫ ಲಕ್ಷಗಳಷ್ಟು ಹಣ ವ್ಯಯವಾಗಿದೆ. ಈ ಹಿಂದಿನ ರಾಜರ ಆಳ್ವಿಕೆ, ಬ್ರಿಟಿಷರ ಆಳ್ವಿಕೆ, ಟಿಪ್ಪುವಿನ ಕಾಲದ ವಿಚಾರಗಳು, ಆಗ ಇದ್ದ ಸ್ಥಿತಿ - ಗತಿ, ಘಟಿಸಿದ - ನಡೆಸಿದ, ನಡೆದ ಘಟನಾವಳಿಗಳು ಇಂತಹ ವಿವರಗಳನ್ನೂ ದಾಖಲೆಗಳ ಆಧಾರ ಸಹಿತವಾಗಿ ಸಂಗ್ರಹ ಮಾಡಲಾಗಿದೆ. ಇದಕ್ಕೆ ಅಗತ್ಯ ಮಾಹಿತಿ - ದಾಖಲೆಗಳನ್ನು ದೇಶದ ಹಲವೆಡೆ ಚೆನ್ನೆöÊ, ಲಂಡನ್‌ನಿAದಲೂ ಪಡೆಯಲಾಗಿದೆ.
ಒಕ್ಕಾಮೆ - ತಕ್ಕಾಮೆ : ೨೦೨೬
ಕಳೆದ ೨೦೨೪ರ ಡಿಸೆಂಬರ್‌ನಲ್ಲಿ ‘‘ಗ್ಲೋಬಲ್ ಕೊಡವ ಸಮ್ಮಿಟ್’’ ಎಂಬ ಕಾರ್ಯಕ್ರಮ ನಡೆಸಿದ್ದ ಕನೆಕ್ಟಿಂಗ್ ಕೊಡವಾಸ್ ಆ ಸಂದರ್ಭದಲ್ಲೇ ಇದರ ಬಿಡುಗಡೆಗೆ ಪ್ರಯತ್ನ ನಡೆಸಿತ್ತಾದರೂ ಸಮಗ್ರ ಮಾಹಿತಿಗೆ ಅಂತಿಮ ಸ್ವರೂಪ ನೀಡಲು ತಡವಾಗಿದ್ದರಿಂದ ಇದನ್ನು ಮುಂದೂಡಿತ್ತು. ಇದೀಗ ‘‘ ಒಕ್ಕಾಮೆ - ತಕ್ಕಾಮೆ : ೨೦೨೬’’ ಎಂಬ ಹೆಸರಿನ ಕಾರ್ಯಕ್ರಮದ ಮೂಲಕ ಇದನ್ನು ಹೊರತರಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ೮ ದೇಶತಕ್ಕರು ೩೫ ನಾಡ್‌ಗಳ ತಕ್ಕರು, ಎಲ್ಲಾ ಕುಟುಂಬಗಳ ಪಟ್ಟೆದಾರರು ಅಥವಾ ಪ್ರತಿನಿಧಿ ಸುಮಾರು ೨೦೦ಕ್ಕೂ ಅಧಿಕ ನಾಡ್ - ಊರ್ - ಕೇರಿಯ ತಕ್ಕರು ಸೇರಿದಂತೆ ಇನ್ನಿತರ ಹಲವು ಪ್ರಮುಖರುಗಳನ್ನು ರಾಜ್ಯ - ದೇಶದ ಪ್ರಮುಖ ಜನಪ್ರತಿನಿಧಿಗಳನ್ನು, ಸಂಬAಧಿಸಿದವರನ್ನು ಆಹ್ವಾನಿಸಿ ಅವರುಗಳ ಉಪಸ್ಥಿತಿಯಲ್ಲಿ ದಾಖಲೆಗಳ ಅನಾವರಣ ಕಾರ್ಯಕ್ರಮ ನಡೆಸುವ ಪ್ರಯತ್ನ ಜರುಗುತ್ತಿದೆ. ಇದಕ್ಕೆ ಸಮಸ್ತ ಕೊಡವ ಜನಾಂಗದ ಸಹಕಾರವನ್ನು ಬಯಸುತ್ತಿರುವುದಾಗಿ ಸಂಘಟನೆ ಪ್ರಮುಖ ನಿರನ್ ನಾಚಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಜನಾಂಗದ ಅಳಿವು - ಉಳಿವಿನ ಚಿಂತನೆಯೊAದಿಗೆ ಸಾಕಷ್ಟ ಶ್ರಮ ಪಟ್ಟು ಎಲ್ಲೆಡೆಗಳಿಗೆ ಖುದ್ದಾಗಿ ಭೇಟಿ ನೀಡಿ ಸಮೀಕ್ಷೆ ನಡೆಸಿ, ವಿವರಗಳನ್ನು ಕ್ರೋಢೀಕರಿಸಲಾಗಿದೆ. ಈಗಿನ ಸನ್ನಿವೇಶದಲ್ಲಿ ಕೊಡಗಿನ - ಕೊಡವರ ನೈಜ ಇತಿಹಾಸಗಳು ನೇಪಥ್ಯಕ್ಕೆ ಸರಿಯುತ್ತಿರುವಂತಹ ಆತಂಕದ ಪರಿಸ್ಥಿತಿಯ ನಡುವೆ ಇದು ಮುಂದಿನ ಪೀಳಿಗೆಗೆ ದಾರಿದೀಪವಾದಂತಾಗಲಿದೆ ಎಂಬದು ಅಭಿಲಾಷೆಯಾಗಿದೆ.