ಹಾಸನ ಅಬಕಾರಿ ಉಪ ಆಯುಕ್ತರಾಗಿ ಸುಮಿತ್ರ
ಮಡಿಕೇರಿ, ನ. ೪: ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ನಂಗಾರು ಸುಮಿತ್ರ ನಿಂಗರಾಜು ನೇಮಕಗೊಂಡಿದ್ದಾರೆ. ಈ ಹಿಂದೆ ಶಿವಮೊಗ್ಗ ಜಿಲ್ಲಾ ಉಪ ಆಯುಕ್ತರಾಗಿದ್ದ ಸುಮಿತ್ರ (ತವರುಮನೆ ಕುಂಬಗೌಡನ ಮಕ್ಕಂದೂರು) ಅವರನ್ನು ಹಾಸನ ಜಿಲ್ಲಾ ಉಪ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇವರು ಮೂಲತಃ ಸೋಮವಾರಪೇಟೆ ತಾಲೂಕಿನ ಬಾಣಾವರ ಗ್ರಾಮ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿಶ್ರಾಂತ ಪ್ರಾಂಶುಪಾಲ ನಂಗಾರು ನಿಂಗರಾಜು ಅವರ ಪತ್ನಿ.