ಸೋಮವಾರಪೇಟೆ, ನ. ೪: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಪುಟಪ್ಪ ವೃತ್ತದಲ್ಲಿ ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಇಂದಿರಾಗಾAಧಿ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಸೇರಿದಂತೆ ಪದಾಧಿಕಾರಿಗಳು, ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ನಾಗರಾಜು ಅವರು, ದೇಶದ ಪ್ರಥಮ ಮಹಿಳಾ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾದ ಇಂದಿರಾ ಗಾಂಧಿ ಅವರು ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದರು. ಆಡಳಿತದಲ್ಲಿ ಹಲವಷ್ಟು ಸುಧಾರಣೆಗಳನ್ನು ತರುವ ಮೂಲಕ ಬಲಿಷ್ಠ ರಾಷ್ಟçಕಟ್ಟಲು ಪಣ ತೊಟ್ಟರು. ದೂರದೃಷ್ಟಿಯ ರಾಜಕಾರಣಿಯಾಗಿ ಇಂದಿಗೂ ಜನಮಾನಸದಲ್ಲಿ ಅವರು ಉಳಿದುಕೊಂಡಿದ್ದಾರೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕಿಬ್ಬೆಟ್ಟ ಧರ್ಮಪ್ಪ, ಇಂದಿರಾಗಾAಧಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಹೆಚ್.ಜಿ. ರಘು, ನವೀನ್, ತಿಮ್ಮಯ್ಯ, ದೇವಕಿ, ನಾಗಾರ್ಜುನ, ಫಾರೂಕ್, ಡಿ. ಮಂಜು, ರಾಜು, ಜೋಯಪ್ಪ, ಧರ್ಮ ಸೇರಿದಂತೆ ಇತರರು ಇದ್ದರು.