ಸಿದ್ದಾಪುರ, ನ. ೪: ತಾಲೂಕುಮಟ್ಟದ ವಿವಿಧ ಕ್ರೀಡಾ ಪಂದ್ಯಾವಳಿಯಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಕೆ.ಪಿ.ಎಸ್. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಬಾಲಕಿರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಭಾರತೀಯ ವಿದ್ಯಾಸಂಸ್ಥೆಯ ತಂಡವನ್ನು ೧-೦ ಗೋಲಿನಿಂದ ಸೋಲಿಸಿ, ಜಿಲ್ಲಾಮಟ್ಟದ ಫುಟ್ಬಾಲ್ ತಂಡಕ್ಕೆ ಕೆ.ಪಿ.ಎಸ್. ಶಾಲೆ ಆಯ್ಕೆ ಆಗಿದೆ. ಇದಲ್ಲದೆ ಕೂಡಿಗೆ ಕ್ರೀಡಾಶಾಲೆಯಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಕೆಪಿಎಸ್ ಶಾಲೆಯ ವಿದ್ಯಾರ್ಥಿ ರೈಸ್ ಮಿಂಚ್ ೬೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಬಾಲಕರ ಫುಟ್ಬಾಲ್ ತಂಡವು ಜಿಲ್ಲಾ ಮಟ್ಟಕ್ಕೆ ಏಳು ಮಂದಿ ವಿದ್ಯಾರ್ಥಿಗಳು ಕೆ.ಪಿ.ಎಸ್. ಶಾಲೆಯಿಂದ ಆಯ್ಕೆಯಾಗಿರುತ್ತಾರೆ ಎಂದು ಕೆ.ಪಿ.ಎಸ್. ಶಾಲೆಯ ಕ್ರೀಡಾ ಉಸ್ತುವಾರಿ ಶಿಕ್ಷಕಿ ರೆಮ್ಮಿ ತಿಳಿಸಿದ್ದಾರೆ.