ಮಡಿಕೇರಿ, ನ. ೨ : ೨೦೨೫-೨೬ನೇ ಸಾಲಿನ ರೋಟರಿ ಸಮುದಾಯದಳದ ಪದಗ್ರಹಣ ಸಮಾರಂಭವು ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯ ಸಭಾಂಗಣದಲ್ಲಿ ನೆರವೇರಿತು.
ರೋಟರಿ ಮಿಸ್ಟಿಹಿಲ್ಸ್ನ ಡಿಸ್ಟಿçಕ್ ವೈಸ್ ಛೇರ್ಮನ್ ಕಮ್ಯುನಿಟಿ ಸರ್ವಿಸ್ ದೇವಣಿರ ತಿಲಕ್ ಅವರು ಮಾತನಾಡಿ, ರೋಟರಿ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಸೇವಾ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದರು. ಸ್ಥಾಪಕಾಧ್ಯಕ್ಷ ಅನಂತಶಯನ ಅವರ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಕಾಳಜಿಯನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದ ಋಣವನ್ನು ತೀರಿಸುತ್ತಾ ಒಟ್ಟಾಗಿ ಸೇವಾ ಕಾರ್ಯದಲ್ಲಿ ಮುಂದುವರಿಯೋಣವೆAದು ಕಿವಿಮಾತುಗಳನ್ನಾಡಿದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ ರೈ ಮಾತನಾಡಿ, ರೋಟರಿ ಸಮುದಾಯದಳದ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರವನ್ನು ರೋಟರಿ ಮಿಸ್ಟಿಹಿಲ್ಸ್ ನೀಡಲಿರುವು ದಾಗಿ ಭರವಸೆ ನೀಡಿದರು.
ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಕಾರ್ಯಪ್ಪ ನಿಕಟಪೂರ್ವ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಸಮುದಾಯ ದಳದ ಉಸ್ತುವಾರಿ ಲವಿನ್, ರೋಟರಿ ಮಿಸ್ಟಿಹಿಲ್ಸ್ ಪ್ರಮುಖರಾದ ವಿನೋದ್ ಅಂಬೆಕಲ್ಲು, ಕಟ್ಟೆಮನೆ ಸೋನಾಜಿತ್, ಪ್ರಮೋದ್ ರೈ, ಶಂಕರ್ ಪೂಜಾರಿ, ಶ್ರೀಹರಿ ರಾವ್ ಸೇರಿದಂತೆ ರೋಟರಿ ಮಿಸ್ಟಿಹಿಲ್ಸ್ನ ಪ್ರಮುಖರು ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
೨೦೨೫-೨೬ನೇ ಸಾಲಿನ ರೋಟರಿ ಸಮುದಾಯದಳದ ಅಧ್ಯಕ್ಷರಾಗಿ ಮೇಕೇರಿಯ ರವೀಂದ್ರ ಟಿ.ಕೆ., ಕಾರ್ಯದರ್ಶಿಯಾಗಿ ಜೆ. ಹರೀಶ್ (ವಿಜು) ಅಧಿಕಾರ ವಹಿಸಿಕೊಂಡರು. ರೋಟರಿ ಸಮುದಾಯ ದಳದ ಮಹಿಳಾ ಸದಸ್ಯರು ಸೇರಿದಂತೆ ಸ್ಥಳೀಯ ೧೫ ಸದಸ್ಯರುಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.