ಶನಿವಾರಸಂತೆ, ನ. ೨: ಸಾಕುಪ್ರಾಣಿಗಳಲ್ಲಿ ರೇಬೀಸ್ ಖಾಯಿಲೆ ಬರದಂತೆ ಲಸಿಕೆ ನೀಡುವುದೊಂದೇ ಉತ್ತಮ ಮಾರ್ಗವಾಗಿದೆ ಎಂದು ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಸ್.ಯಶವಂತ್ ಹೇಳಿದರು.
ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ರೋಟರಿ ಕ್ಲಬ್, ಪಶುಪಾಲನಾ ಇಲಾಖೆ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ೯ ನೇ ವರ್ಷದ ಉಚಿತ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ರೇಬೀಸ್ ನಿಯಂತ್ರಣ ಲಸಿಕಾ ಶಿಬಿರವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶನಿವಾರಸಂತೆ ಪಶುಪಾಲನಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಎಂ.ಸತೀಶ್ ಕುಮಾರ್ ಮಾತನಾಡಿ, ರೇಬೀಸ್ ರೋಗವು ಮುಖ್ಯವಾಗಿ ೩ ತಿಂಗಳ ಮೇಲ್ಪಟ್ಟ ನಾಯಿ ಮತ್ತು ಬೆಕ್ಕುಗಳಿಂದ ಹರಡುತ್ತದೆ. ನಾಯಿ-ಬೆಕ್ಕು ಪ್ರಮುಖ ವಾಹಕವಾಗಿದ್ದು ಈ ರೋಗವನ್ನು ಲಸಿಕೆ ಮೂಲಕ ತಡೆಗಟ್ಟಬಹುದು ಎಂದರು.
ರೋಟರಿ ಕ್ಲಬ್ ನಿಯೋಜಿತ ಸಹಾಯಕ ಗವರ್ನರ್ ಎಚ್.ಎಸ್.ವಸಂತಕುಮಾರ್ ಮಾತನಾಡಿ, ರೋಟರಿ ಕ್ಲಬ್ ೨೦೧೬ ರಿಂದ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ರೇಬೀಸ್ ನಿಯಂತ್ರಣ ಲಸಿಕೆಯನ್ನು ಉಚಿತವಾಗಿ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ.ರೋಟರಿ ಮಾಡುವ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದ್ದು ರೈತರು ಮತ್ತು ಪ್ರಾಣಿಪ್ರಿಯರ ಸಾಕು ಪ್ರಾಣಿಗಳಿಗಾಗಿ ಶಿಬಿರವನ್ನು ಆಯೋಜಿಸಲಾಗುತ್ತಿದೆ.ವುಡ್ ಕ್ರಾಫ್ಟ್ ಇಂಡಿಯಾ ಲಸಿಕೆ ಪ್ರಾಯೋಜಕರಾಗಿದ್ದು ಸಹಕಾರ ನೀಡುತ್ತಿದ್ದಾರೆ ಎಂದರು. ಕೊಡ್ಲಿಪೇಟೆ ಪಶುವೈದ್ಯಾಧಿಕಾರಿ ಡಾ.ಅಮರ್, ರೋಟರಿ ಕ್ಲಬ್ ಕಾರ್ಯದರ್ಶಿ ಚಂದನ್, ರೊಟೇರಿಯನ್‌ಗಳಾದ ದಿವಾಕರ್, ಎ.ಎಚ್,ಚಂದ್ರಕಾAತ್, ಟಿ.ಆರ್.ಪುರುಷೋತ್ತಮ್, ಸುರೇಶ್, ಮಹೇಶ್, ಎಚ್.ಎಸ್. ಶರತ್, ಇತರ ಸದಸ್ಯರು, ಪಶು ಇಲಾಖೆ ಸಿಬ್ಬಂದಿ ಸರ್ವರ್ ಪಾಶ, ಇತರರು ಇದ್ದರು.