ಕೂಡಿಗೆ, ನ. ೧: ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಅನೇಕ ಬೆಳೆಗಳು ಹಾಳಾಗುತ್ತಿವೆ. ಭತ್ತದ ಬೆಳೆಯು ಈಗಾಗಲೇ ಕಾಳುಗಳನ್ನು ಕಟ್ಟುವ ಜಾಗದಲ್ಲಿ ಹೆಚ್ಚಾಗಿ ಕರಿಕಡ್ಡಿಗಳು ಕಂಡುಬರುತ್ತಿದ್ದು ಇದರಿಂದಾಗಿ ಭತ್ತದ ಇಳುವರಿಯಲ್ಲಿ ಕುಂಠಿತ ಕಂಡುಬರುತ್ತಿದೆ.

ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಹರಿಸುವ ನಾಲೆಯ ನೀರನ್ನು ಗದ್ದೆಗಳಲ್ಲಿ ಬಳಕೆ ಮಾಡಿಕೊಂಡು ಈಗಾಗಲೇ ರೈತರು ಹೈಬ್ರೀಡ್ ತಳಿಯ ವಿವಿಧ ಬಗೆಯ ಭತ್ತದ ಬೆಳೆ ನಾಟಿಗಳನ್ನು ಮಾಡಿ ಈಗಾಗಲೇ ಎರಡುವರೆ ತಿಂಗಳುಗಳು ಕಳೆದಿದೆ. ವಿಪರೀತ ಮಳೆಯಿಂದಾಗಿ ಭತ್ತದ ಇಳುವರಿ ಕಡಿಮೆಯಾಗುವುದರ ಜೊತೆಯಲ್ಲಿ ಕರಿಕಡ್ಡಿಗಳಿಂದ ಇಳುವರಿ ಕಡಿಮೆಯಾಗಿ ಭಾರಿ ನಷ್ಟದ ಆತಂಕ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕಾಡುತ್ತಿದೆ.

ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯು ಕುಂಠಿತವಾಗಿ ನಷ್ಟವಾಗುವುದರ ಜೊತೆಯಲ್ಲಿ ಭತ್ತದ ಬೆಳೆಗೂ ತೊಂದರೆಗಳು ಆಗುತ್ತಿವೆ. ಸಂಬAಧಿಸಿದ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸುವಂತೆ ವ್ಯಾಪ್ತಿಯ ರೈತರ ಒತ್ತಾಯವಾಗಿದೆ.