ಶಾಸಕ ಡಾ. ಮಂತರ್ ಗೌಡ ಮಾಹಿತಿ
ಕೂಡಿಗೆ, ನ, ೨: ಜಿಲ್ಲೆಯಲ್ಲಿ ಪ್ರಥಮವಾಗಿ ಹಾರಂಗಿಯಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರವಾಸಿಗರ ವೀಕ್ಷಣೆಗೆ ಅಧುನಿಕ ಮತ್ಸಾö್ಯಲಯ ಕೇಂದ್ರವನ್ನು ತೆರೆಯುವ ಚಿಂತನೆಯೊAದಿಗೆ ಈಗಾಗಲೇ ಇಲಾಖೆಯ ವತಿಯಿಂದ ೧೦ ಕೋಟಿ ಹಣ ಬಿಡುಗಡೆಗೆ ಸಂಬAಧಿಸಿದAತೆ ರಾಜ್ಯ ಮಟ್ಟದಲ್ಲಿ ಚರ್ಚೆಗಳು ನಡೆದ ಹಿನ್ನೆಲೆಯಲ್ಲಿ ಹಾರಂಗಿಯ ನೀರಾವರಿ ಇಲಾಖೆಯ ಜಾಗದಲ್ಲಿ ಮತ್ಸಾö್ಯಲಯ ಕೇಂದ್ರವನ್ನು ಆರಂಭಗೊಳಿಸುವ ಸಿದ್ಧತೆಗಳು ಮೀನುಗಾರಿಕೆ ಇಲಾಖೆಯ ವತಿಯಿಂದ ಆರಂಭಗೊAಡಿವೆ. ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾರಂಗಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ದಿನಂಪ್ರತಿ ಸಾವಿರಾರು ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪ್ರವಾಸಿಗರಿಗೆ ಹಾರಂಗಿ ಅಣೆಕಟ್ಟೆಯ ಬೃಂದಾವನ ಉದ್ಯಾನವದ ವೀಕ್ಷಣೆ, ಸಮೀಪದಲ್ಲಿರುವ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ವೀಕ್ಷಣೆಯ ಜೊತೆಯಲ್ಲಿ ಅನುಕೂಲವಾಗುವಂತೆ ಹೊಸ ಮಾದರಿಯಲ್ಲಿ ಅಧುನಿಕ ವ್ಯವಸ್ಥೆಯ ಅಡಿಯಲ್ಲಿ ನೂತನವಾಗಿ ಮತ್ಸಾö್ಯಲಯ ಕೇಂದ್ರವನ್ನು ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಂಡು ಸಂಬAಧಿಸಿದ ಮೀನುಗಾರಿಕೆ ಇಲಾಖೆಯವರು ಇದಕ್ಕೆ ಮುಂದಾಗಿದಾರೆ.
ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಜಾಗವು ನೀರಾವರಿ ಇಲಾಖೆ ಸೇರಿದ್ದು, ಎರಡೂ ಇಲಾಖೆಯ ನಡುವೆ ಒಪ್ಪಂದದAತೆ ಈಗಾಗಲೇ ಮೀನುಗಾರಿಕೆ ಇಲಾಖೆಗೆ ಜಾಗವನ್ನು ನೀಡುವ ವಿಷಯಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯವು ಸಹ ನಡೆದಿದೆ. ಜಾಗ ಗುರುತಿಸುವಿಕೆಯ ನಂತರ ಕಾಮಗಾರಿ ಕ್ರಿಯಾ ಯೋಜನೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆ ನಡೆದು ನೂತನ ಯೋಜನೆಯ ಕಾರ್ಯಗತಗೊಳ್ಳುವುದು ಎಂದು ಶಾಸಕರು ತಿಳಿಸಿದರು.
ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ಮತ್ಸಾö್ಯಲಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸ್ಥಳ ಹಸ್ತಾಂತರ ನೀಡಿದ ತಕ್ಷಣ ಮೀನುಗಾರಿಕೆ ಇಲಾಖೆಯ ಮೂಲಕ ಈಗಾಗಲೇ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ರೂ ೧೦. ಕೋಟಿ ವೆಚ್ಚದ ಹಣದಲ್ಲಿ ಅಧುನಿಕ ತಂತ್ರಜ್ಞಾನವುಳ್ಳ ಮತ್ಸಾö್ಯಲಯ ಕೇಂದ್ರ ನಿರ್ಮಾಣ ಕಾರ್ಯ ಕೈಗೊಳ್ಳಲು ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಸಿದ್ಧರಾಗಿದ್ದಾರೆ.
ಇದ್ದಕ್ಕೆ ಸಂಬAಧಿಸಿದAತೆ ರಾಜ್ಯ ಮೀನುಗಾರಿಕೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ. ಅದರಂತೆ ನೀರಾವರಿ ಇಲಾಖೆಯ ವತಿಯಿಂದ ಸ್ಥಳದ ಹಸ್ತಾಂತರ ದೊರೆದ ನಂತರ ಮತ್ಸಾö್ಯಲಯ ಕೇಂದ್ರ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳುವ ಬರದ ಸಿದ್ಧತೆಗಳು ಮೀನುಗಾರಿಕೆ ಇಲಾಖೆಯ ವತಿಯಿಂದ ನಡೆಯುತ್ತಿದೆ. ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾರಂಗಿಗೂ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲಿ ಕಾಮಗಾರಿಯು ಆರಂಭಗೊಳ್ಳುವುದು ಎಂದು ಡಾ. ಮಂತರ್ ಗೌಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ರಾವ್, ಕಾವೇರಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಟಿ.ಕೆ. ಪಾಂಡುರAಗ, ಉಮಾ, ಹೆಬ್ಬಾಲೆ ಶೇಖರ್, ಕೆ.ಎಸ್. ಕೃಷ್ಣಗೌಡ, ಕೂಡಿಗೆ ಅಣ್ಣಯ್ಯ, ಹೆಬ್ಬಾಲೆ ರಂಜನ್, ಸೇರಿದಂತೆ ಪಕ್ಷ ವಿವಿಧ ಘಟಕದ ಪದಾಧಿಕಾರಿಗಳು ಇದ್ದರು. - ಕೆ.ಕೆ. ನಾಗರಾಜಶೆಟ್ಟಿ