ಮಡಿಕೇರಿ, ನ.೧; ಕೊಡಗು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಕಾರ್ಯಕ್ಕೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು.
ಇಲ್ಲಿನ ಮಹಾತ್ಮ ಗಾಂಧಿ ರಸ್ತೆ ಬದಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಿವೇಶನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು; ಕಳೆದ ೪೯ ವರ್ಷಗಳಿಂದ ಭವನ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭ ತಾನು ಪ್ರಧಾನ ಕಾರ್ಯದರ್ಶಿಯಾಗಿದ್ದು, ರಾಜ್ಯದ ಎಲ್ಲ ಕಡೆ ಸಂಚರಿಸಿ ಕಚೇರಿ ನಿರ್ಮಾಣ ಮಾಡುವ ಬಗ್ಗೆ ಪರಿಶೀಲಿಸಿದ್ದೆವು. ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳು ಎಲ್ಲ ಕಡೆಗಳಲ್ಲಿಯೂ ಕಾಂಗ್ರೆಸ್ ಭವನ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಿದ್ದಾರೆ. ೧೦೦ ಭವನಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಶೀಘ್ರದಲ್ಲಿಯೇ ರಾಷ್ಟಿçÃಯ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮಡಿಕೇರಿಯ ಭವನ ಕಾಮಗಾರಿ ಕೂಡಲೇ ಆರಂಭ ಮಾಡಬೇಕು. ಎಲ್ಲ ಕಾರ್ಯಕರ್ತರು, ಸದಸ್ಯರುಗಳು ಸ್ವಯಂಪ್ರೇರಿತರಾಗಿ ನೆರವು ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಮಾತನಾಡಿ; ಭವನ ನಿರ್ಮಾಣಕ್ಕೆ ಪ್ರತಿಯೋರ್ವರ ಸಹಕಾರ ಬೇಕು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದವರೆಲ್ಲ ಸಹಕಾರ ಮಾಡಿದರೆ ಭವನ ನಿರ್ಮಾಣ ಸುಲಭವಾಗಲಿದೆ. ಎಲ್ಲರೂ ಸೇರಿಕೊಂಡು ನಿರ್ಮಾಣ ಮಾಡೋಣ, ಈ ವರ್ಷದೊಳಗಡೆ ಪೂರ್ಣವಾಗಲಿ ಎಂದು ಆಶಿಸಿದರು.
ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ; ಭವನ ನಿರ್ಮಾಣದಲ್ಲಿ ಪ್ರತಿಯೋರ್ವರ ಪಾಲುದಾರಿಕೆ ಇರಬೇಕು. ಪ್ರತಿಯೋರ್ವರು ಕನಿಷ್ಟ ೧ ಸಾವಿರ ರೂಪಾಯಿಯಾದರೂ ನೀಡಬೇಕು. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿರುವ ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಹನ್ನೊಂದು ವರ್ಷದ ಅವಧಿಯಲ್ಲಿ ಬಿಜೆಪಿಯವರು ೬೫೦೦ ಕಟ್ಟಡಗಳನ್ನು ಮಾಡಿಕೊಂಡಿದ್ದಾರೆ. ಇತಿಹಾಸವಿರುವ ನಮ್ಮ ಪಕ್ಷದಲ್ಲಿ ಇನ್ನೂ ಆಗಿಲ್ಲ, ಎಲ್ಲರಿಗೂ ಪಕ್ಷದಿಂದ ಲಾಭವಾಗಿದೆ. ಎಲ್ಲರೂ ಧಾರಾಳವಾಗಿ ಸಹಾಯ ಮಾಡಬೇಕು. ಈ ಭವನ ತಮ್ಮ ಭವನ ಎಂಬ ಭಾವನೆ ಬರಬೇಕು. ಇಲ್ಲಿಯವರ ಪಕ್ಷ ಸಿದ್ಧಾಂತ ಎಲ್ಲ ಕಡೆಗಳಿಗೂ ಮಾದರಿಯಾಗಬೇಕೆಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ; ಭವನದಷ್ಟೇ ಕಾರ್ಯಕರ್ತರು ಕೂಡ ಕಾಂಗ್ರೆಸ್ ಪಕ್ಷದ ಆಸ್ತಿ, ಯಾರೂ ಕೂಡ ಕಾರ್ಯಕರ್ತರಲ್ಲಿ ಹಣಕ್ಕಾಗಿ ಒತ್ತಡ ಹೇರಬೇಡಿ, ಕೊಟ್ಟಿದ್ದನ್ನು ಸ್ವೀಕರಿಸಿ, ಎಲ್ಲರೂ ಕೈಜೋಡಿಸಿ ಭವನ ನಿರ್ಮಾಣ ಮಾಡೋಣ. ಕೊಡಗಿನಿಂದ ಹೋಗಿ ಹೊರಜಿಲ್ಲೆ, ರಾಜ್ಯಗಳಲ್ಲಿ ಶ್ರೀಮಂತರಾಗಿರುವ ಪಕ್ಷದ ನಾಯಕರುಗಳಿದ್ದಾರೆ, ಅವರುಗಳ ಸಹಕಾರ ಪಡೆದುಕೊಳ್ಳೋಣವೆಂದು ಸಲಹೆ ಮಾಡಿದರು. ಕಟ್ಟಡ ನಿರ್ಮಾಣ ಸಂದರ್ಭ ಸ್ಥಳೀಯ ಕಾರ್ಯಕರ್ತರು ಕಾಮಗಾರಿ ಬಗ್ಗೆ ಉಸ್ತುವಾರಿಗಳಾಗಿ ನೋಡಿಕೊಳ್ಳಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಭವನ ನಿರ್ಮಾಣ ಕಾಂಗ್ರೆಸಿಗರ ಬಹುವರ್ಷಗಳ ಕನಸು. ಎರಡು ಬಾರಿ ಭೂಮಿ ಪೂಜೆ ನೆರವೇರಿದ್ದರೂ ಕೆಲವೊಂದು ಕಾರಣಗಳಿಂದ ನಿರ್ಮಾಣ ಸಾಧ್ಯವಾಗಲಿಲ್ಲ, ಇದೀಗ ಮೂರನೇ ಬಾರಿಗೆ ಭೂಮಿಪೂಜೆ ನೆರವೇರಿದ್ದು, ಕನಸು ನನಸಾಗುವ ಹಾದಿಯಲ್ಲಿದೆ ಎಂದು ಹೇಳಿದರು. ನಿವೇಶನ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಹೋರಾಟದ ಮೂಲಕ ನ್ಯಾಯಾಲಯದ ಮೂಲಕ ಪಡೆದುಕೊಂಡದ್ದನ್ನು ನೆನಪಿಸಿಕೊಂಡ ಅವರು, ಭವನ ನಿರ್ಮಾಣಕ್ಕೆ ೧೨ ಮಂದಿಯ ಕೊಡಗು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿ ಟ್ರಸ್ಟ್ ರಚನೆ ಮಾಡಲಾಗಿದೆ. ಸಲಹಾ ಸಮಿತಿ ಕೂಡ ಮಾಡಿಕೊಂಡು ಕಾರ್ಯೋನ್ಮುಖವಾಗಿದ್ದು, ರೂ. ೩.೫ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಭವನ ನಿರ್ಮಾಣವಾಗಲಿದೆ. ಆರ್ಥಿಕ ಕ್ರೋಢೀಕರಣ ಅಗತ್ಯವಿದ್ದು, ಎಲ್ಲರೂ ಕೈಜೋಡಿಸುವಂತೆ ಕೋರಿದರು.
ಪಕ್ಷದ ನಾಯಕರುಗಳಾದ ಪಿ.ಸಿ.ಹಸೈನಾರ್, ವೀಣಾ ಅಚ್ಚಯ್ಯ, ಕೆ.ಎಂ.ಲಕ್ಷö್ಮಣ್, ಕೆ.ಪಿ.ಚಂದ್ರಕಲಾ, ಚಂದ್ರಮೌಳಿ, ಹೆಚ್.ಎಂ. ನಂದಕುಮಾರ್ ಅವರುಗಳು ಭವನ ನಿರ್ಮಾಣಕ್ಕೆ ನೆರವು ನೀಡುವದಾಗಿ ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪಕ್ಷದ ಪ್ರಮುಖರುಗಳಾದ ಕೆ.ಬಿ.ಶಾಂತಪ್ಪ, ಕೆ.ಕೆ.ಮಂಜುನಾಥ್, ಬೇಕಲ್ ರಮಾನಾಥ್, ಪಿ.ಕೆ. ಪೊನ್ನಪ್ಪ, ಕೆ.ಎ. ಯಾಕೂಬ್, ಕೊಲ್ಯದ ಗಿರೀಶ್, ಸುಜು ತಿಮ್ಮಯ್ಯ, ಸುರಯ್ಯ ಅಬ್ರಾರ್ ಸೇರಿದಂತೆ ಇತರರು ಇದ್ದರು. ಕಟ್ಟೆಮನೆ ಮಹಾಲಕ್ಷಿö್ಮ ಪ್ರಾರ್ಥಿಸಿದರೆ, ಪ್ರಚಾರ ಸಮಿತಿ ಸಂಚಾಲಕ ಟಿ.ಪಿ. ರಮೇಶ್ ನಿರೂಪಿಸಿದರು.