ಮಡಿಕೇರಿ, ಅ. ೩೧: ಸರ್ದಾರ್ ವಲಭಬಾಯಿ ಪಟೇಲ್ ಅವರ ೧೫೦ನೇ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟಿçÃಯ ಏಕತಾ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದು “ಏಕತೆಗಾಗಿ ಓಟ'' (ಖUಓ ಈಔಖ UಓIಖಿಙ) ನಡೆಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾಜಕೀಯ ಪಕ್ಷ, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಭಾಗಿಗಳಾಗುವ ಮೂಲಕ ರಾಷ್ಟಿçÃಯ ಏಕತೆಯ ಸಂದೇಶವನ್ನು ಸಾರಿದರು. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆಗಳಲ್ಲಿ ಏಕತೆಗಾಗಿ ಓಟವನ್ನು ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾಗಾAಧಿ ವೃತ್ತ, ಕಾಲೇಜು ರಸ್ತೆ ಮೂಲಕ ಡಿಎಆರ್ ಮೈದಾನದತನಕ ನಡೆದ ಓಟದಲ್ಲಿ ಮಡಿಕೇರಿ ನಗರ ಪೊಲೀಸ್ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳೊAದಿಗೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಎಸ್‌ಪಿ ಕೆ. ರಾಮರಾಜನ್, ಎಎಸ್‌ಪಿ ಬಾರಿಕೆ ದಿನೇಶ್‌ಕುಮಾರ್, ಡಿವೈಎಸ್‌ಎಸ್‌ಪಿ ಸೂರಜ್, ಸೆನ್ ಡಿವೈಎಸ್‌ಪಿ ರವಿ, ಇನ್ಸ್ಪೆಕ್ಟರ್‌ಗಳಾದ ರಾಜು, ಚಂದ್ರಶೇಖರ್, ಐ.ಪಿ. ಮೇದಪ್ಪ, ಎಸ್‌ಐಗಳಾದ ಅನ್ನಪೂರ್ಣ, ತಮ್ಮಯ್ಯ, ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸಾಯಿ ಕೇಂದ್ರದ ವಿದ್ಯಾರ್ಥಿಗಳೂ ತೊಡಗಿಸಿಕೊಂಡಿದ್ದರು.

ವೀರಾಜಪೇಟೆಯಲ್ಲಿ

“ಏಕತೆಗಾಗಿ ಓಟ’’

ವೀರಾಜಪೇಟೆ: ರಾಷ್ಟಿçÃಯ ಏಕತಾ ದಿನ ಪ್ರಯುಕ್ತ, ವೀರಾಜಪೇಟೆ ತಾಲೂಕು ಮೈದಾನದಲ್ಲಿ ಏಕತೆಗಾಗಿ ಓಟ ೨೦೨೫ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹುಟ್ಟಿದ ದಿನವನ್ನು ರಾಷ್ಟಿçÃಯ ಏಕಾತ ದಿನ ಎಂದು ಆಚರಿಸಲಾಗುತ್ತಿದ್ದು, ಇದರ ಪ್ರಯುಕ್ತ ಕೊಡಗು ಜಿಲ್ಲಾ ಪೊಲೀಸ್ ವೀರಾಜಪೇಟೆ ಉಪ ವಿಭಾಗ, ವೀರಾಜಪೇಟೆ ವೃತ್ತ, ವೀರಾಜಪೇಟೆ ನಗರ ಠಾಣೆ ಹಾಗೂ ವೀರಾಜಪೇಟೆ ಗ್ರಾಮಾಂತರ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಏಕತೆಗಾಗಿ ಓಟ-೨೦೨೫ ಕಾರ್ಯಕ್ರಮವನ್ನು ಶಾಸಕರು ಉದ್ಘಾಟಿಸಿ, ತಾಲೂಕು ಮೈದಾನದಿಂದ ವೀರಾಜಪೇಟೆ ನಗರದಾದ್ಯಂತ ಹೆಜ್ಜೆ ಹಾಕಿದ ಶಾಸಕರು ಏಕತೆಯ ಸಂದೇಶ ಸಾರಿದರು. ಬಳಿಕ ಮಾತನಾಡಿದ ಶಾಸಕರು, ಭಾರತದ ಸಾರ್ವಭೌಮತೆ ಉಳಿಸಿಕೊಳ್ಳಲು ದೇಶದ ನಾಗರಿಕರಲ್ಲಿ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಏಕತೆ ಭಾವನೆ ಅತೀ ಮುಖ್ಯವಾಗಿದೆ. ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ÷್ಯ ಹೋರಾಟಗಾರರು ನಮಗೆ ತಂದುಕೊಟ್ಟ ಸ್ವತಂತ್ರ ಭಾರತದ ಸ್ವರ್ಣ ಯುಗವನ್ನು ಮುಂದುವರಿಸಲು ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಾಗಿ ಇರುವುದು ಅವಶ್ಯಕವಾಗಿದೆ.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ದೇಶಕ್ಕಾಗಿ ಪ್ರಾಣತ್ಯಾಗ, ಮಾಡಿದ್ದವರನ್ನು ಮರೆಯಬಾರದು. ಶಾಲಾ ಮಕ್ಕಳು ಕೂಡ ಬಿಡುವಿನ ವೇಳೆಯಲ್ಲಿ ಮಹಾನ್ ವ್ಯಕ್ತಿಗಳ ಸಾಧನೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಸಕ ಪೊನ್ನಣ್ಣ ಕರೆ ನೀಡಿದರು.

ಈ ಸಂದರ್ಭ ಪ್ರತಿಜ್ಞಾ ವಿಧಿಯನ್ನು ವೀರಾಜಪೇಟೆ ವೃತ್ತ ನೀರಿಕ್ಷಕ ಅನೂಪ್ ಮಾದಪ್ಪ ಬೋಧಿಸಿದರು. ಡಿ.ವೈ.ಎಸ್. ಪಿ.ಮಹೇಶ್ ಕುಮಾರ್, ವೀರಾಜಪೇಟೆ ನಗರ, ಗ್ರಾಮಾಂತರ ಠಾಣೆಯ ಪೊಲೀಸರು, ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ಲತಾ, ವಾಣಿಶ್ರಿ ಭಾಗವಹಿಸಿದ್ದರು.

ಜಾಥಾದಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್‌ನ ಪೌಲ್ ಕ್ಷೇವಿಯರ್, ಪ್ರತಾಪ್, ರೋಟರಿ ಕ್ಲಬ್, ಕ್ಲಬ್ ಮಹೀಂದ್ರ, ಡೆಂಟಲ್ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂತ ಅನ್ನಮ್ಮ ಕಾಲೇಜು, ಕಾವೇರಿ ಕಾಲೇಜು ವಿದ್ಯಾರ್ಥಿಗಳು, ವಕೀಲರ ಸಂಘದ ಪದಾಧಿಕಾರಿಗಳು, ಕೊಡವ ಸಮಾಜದ ಅದ್ಯಕ್ಷ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಇನ್ನಿತರ ಕಾಲೇಜು ವಿದ್ಯಾರ್ಥಿಗಳು, ಸೇರಿದಂತೆ ಹಲವಾರು ಸಂಸ್ಥೆಯ ಪÀದಾಧಿಕಾರಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ತಾಲೂಕು ಮೈದಾನದಿಂದ ಆರಂಭಗೊAಡು ಮ್ಯಾರಥಾನ್ ಗಡಿಯಾರ ಕಂಬದ ಮುಖ್ಯ ರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣ, ಅಬ್ದುಲ್ ಕಲಾಂ ರಸ್ತೆ, ಗೋಣಿಕೊಪ್ಪ ರಸ್ತೆ, ಸರಕಾರಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಎಫ್‌ಎಮ್‌ಸಿ ರಸ್ತೆ ಮೂಲಕ ಸಾಗಿ ಮಹಿಳಾ ಸಮಾಜದ ಬಳಿ ಸಂಪನ್ನಗೊAಡಿತು.