ಮಡಿಕೇರಿ, ಅ. ೩೧: ಮಡಿಕೇರಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಮಡಿಕೇರಿ ವತಿಯಿಂದ ರೋರ‍್ಯಾಕ್ಟ್ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು.

ರೋರ‍್ಯಾಕ್ಟ್ ಸಂಘದ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೀವನ್ ಹೆಚ್.ಕೆ., ಉಪಾಧ್ಯಕ್ಷರಾಗಿ ನಿಷ್ಮ, ಕಾರ್ಯದರ್ಶಿಯಾಗಿ ರಾಹುಲ್ ಪಿ.ಆರ್., ಸಾರ್ಜೆಂಟ್ ಅಟ್ ಅರ್ಮ್ಸ್ ಆಗಿ ಮಮತಾ, ಖಜಾಂಚಿ ಗಾಯತ್ರಿ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮೇಘನಾ ಹಾಗೂ ಸಮುದಾಯ ಸೇವಾ ನಿರ್ದೇಶಕರಾಗಿ ಅಕ್ಷತಾ ಅವರು ಅಧಿಕಾರ ವಹಿಸಿಕೊಂಡರು.

ಅನುಸ್ಥಾಪನ ಅಧಿಕಾರಿಯಾಗಿ ಉಪಸ್ಥಿತರಿದ್ದ ಮನೋಹರ್ ಹೆಚ್. ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿ ಕಾರ್ಯಚಟುವಟಿಕೆಯ ಕುರಿತು ವಿವರಿಸಿದರು ಮತ್ತು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ರೋಟರಿ ಮಡಿಕೇರಿಯ ಅಧ್ಯಕ್ಷರಾದ ಲಲಿತ ರಾಘವನ್ ಅವರು ರೋಟರಿ ಸಂಸ್ಥೆ ಮತ್ತು ಶುಚಿತ್ವದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ ಪ್ರಸನ್ನ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ. ಅನುಪಮಾ ಸಭಾಪತಿ, ರೋರ‍್ಯಾಕ್ಟ್ ಸಂಯೋಜಕಿ ಸುಪ್ರಿಯಾ, ಕಳೆದ ಸಾಲಿನ ರೋಟರ‍್ಯಾಕ್ಟ್ ಅಧ್ಯಕ್ಷರಾದ ಸುಫಾನ ಬಿ., ನೂತನ ಅಧ್ಯಕ್ಷ ಜೀವನ್ ಹೆಚ್.ಕೆ., ಕಾರ್ಯದರ್ಶಿ ರಾಹುಲ್ ಪಿ.ಆರ್., ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ನಿಷ್ಮ ಮತ್ತು ತಂಡ ಪ್ರಾರ್ಥಿಸಿದರು, ಅಕ್ಷತಾ ಸ್ವಾಗತಿಸಿ, ಮೇಘನಾ ಪೂವಯ್ಯ ನಿರೂಪಿಸಿ, ರಾಹುಲ್ ವಂದಿಸಿದರು. ರಚನಾ ಪದಗ್ರಹಣ ಅಧಿಕಾರಿಗಳ ಕಿರುಪರಿಚಯ ಮಾಡಿದರು. ರಾಷ್ಟçಗೀತೆಯ ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.