ಮಡಿಕೇರಿ, ಅ. ೩೧ : ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ಪ್ರಯುಕ್ತ ಅಖಂಡ ಭಾರತ ಸಂಕಲ್ಪಕ್ಕಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಏಕತಾ ದಿನವನ್ನು ಆಚರಿಸಲಾಯಿತು.
ನಗರದ ಫೀ.ಮಾ ಕಾರ್ಯಪ್ಪ ವೃತ್ತದಲ್ಲಿ ಯಾತ್ರೆಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಪ್ರಮುಖರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ ರಂಜನ್, ಹರಿದು ಹಂಚಿ ಹೋಗಿದ್ದ ಭಾರತದ ಪ್ರಾಂತ್ಯಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣದ ಕನಸು ಕಂಡಿದ್ದರು. ಇದಕ್ಕಾಗಿ ಆಗಿನ ಎಲ್ಲ ರಾಜರುಗಳನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು. ಆದರೆ, ಕೆಲವರ ಅಸಹಕಾರದಿಂದಾಗಿ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಕನಸು ಸಾಕಾರ ಮಾಡುವ ನಿಟ್ಟಿನಲ್ಲಿ ಮೋದಿ ಸರಕಾರ ಅವರ ಜನ್ಮ ದಿನವನ್ನು ಏಕತಾ ದಿವಸ ಎಂದು ಘೋಷಿಸಿದ್ದು, ಅದರಂತೆ ಇಂದು ಏಕತಾ ಯಾತ್ರೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ನಂತರ ಜ.ತಿಮ್ಮಯ್ಯ ವೃತ್ತದವರೆಗೆ ಪಾದಯಾತ್ರೆ ನಡೆಸಲಾಯಿತು. ಅಲ್ಲಿ ಮಾತನಾಡಿದ ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು; ರಾಷ್ಟçದ ಮೊದಲ ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದ ವಲ್ಲಭ ಭಾಯಿ ಪಟೇಲ್ ಅವರಿಗೆ ಅವಕಾಶ ನೀಡಲಿಲ್ಲ. ಭಾರತ ಭೂಮಿಯ ಮೇಲೆ ವ್ಯಾಮೋಹ ಹೊಂದಿದ್ದ ಪಟೇಲ್ ಅವರಿಗೆ ಈಗಿನ ಪಾಕಿಸ್ತಾನ ಬಾಂಗ್ಲಾದೇಶ ಸೇರಿದಂತೆ ಎಲ್ಲ ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತ ಮಾಡುವ ಕನಸು ಹೊಂದಿದ್ದರು. ಆದರೆ, ಅವರ ಕನಸು ನನಸಾಗಲಿಲ್ಲ. ನಂತರದಲ್ಲಿ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಗಾಂಧಿ ಕುಟುಂಬದ ಸರಕಾರ ಇದ್ದಲ್ಲಿವರೆಗೂ ಅವರ ಕೊಡುಗೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅವರ ಜನ್ಮ ದಿನವನ್ನು ಏಕತಾ ದಿನವೆಂದು ಘೋಷಿಸಿದ್ದಾಯಿತು. ಮುಂದಿನ ದಿನಗಳಲ್ಲಿ ಪಟೇಲ್ ಅವರ ಕನಸು ನನಸಾಗಲಿದೆ. ಎಲ್ಲರೂ ವಿಶ್ವಾಸದಿಂದ ಹೆಜ್ಜೆಯಿಡೋಣವೆಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ಕಾಳಪ್ಪ ಮಾತನಾಡಿ; ಇದೊಂದು ವಿಶೇಷಸಂದರ್ಭವಾಗಿದ್ದು, ಪಟೇಲ್ ಅವರ ಕೊಡುಗೆ ಹಳ್ಳಿ ಹಳ್ಳಿಗೂ ತಿಳಿಯಬೇಕೆಂಬ ಉದ್ದೇಶದೊಂದಿಗೆ ಹಾಗೂ ದೇಶದ ಏಕತೆಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಯದಲ್ಲೇ ಇದೊಂದು ಸರಕಾರಿ ಕಾರ್ಯಕ್ರಮವಾಗಲಿದ್ದು, ಸುಮಾರು ೧೦ ಕಿ.ಮೀ.ವರೆಗೆ ಪಾದಯಾತ್ರೆ ಮಾಡಲಾಗುವದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ವಕ್ತಾರರಾದ ಬಿ.ಕೆ.ಅರುಣ್‌ಕುಮಾರ್, ತಳೂರು ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಖಜಾಂಚಿ ಕನ್ನಂಡ ಸಂಪತ್, ಉಪಾಧ್ಯಕ್ಷ ಕಿಲನ್ ಗಣಪತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ನಗರ ಸಭಾಧ್ಯಕ್ಷೆ ಕಲಾವತಿ, ಸದಸ್ಯ ಅರುಣ್ ಶೆಟ್ಟಿ, ಪ್ರಮುಖರುಗಳಾದ ರವಿ ಕುಶಾಲಪ್ಪ, ಬಿ.ಬಿ.ಭಾರತೀಶ್, ರಾಬಿನ್ ದೇವಯ್ಯ, ನಾಗೇಶ್ ಕುಂದಲ್ಪಾಡಿ, ಸುವಿನ್ ಗಣಪತಿ, ಬಾಂಡ್ ಗಣಪತಿ, ಕನ್ನಿಕೆ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಪ್ರತಿಜ್ಞಾವಿಧಿ ಬೋಧಿಸಿದರು.