ಮಡಿಕೇರಿ, ಅ. ೨೯: ಕಾಫಿ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಪರವಾನಗಿ ಪಡೆದಿರುವ ಕಾಫಿ ಕ್ಯೂರಿಂಗ್ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸ್ಟೆöÊಫಂಡ್(ವಿದ್ಯಾರ್ಥಿ ವೇತನ), ಪ್ರೋತ್ಸಾಹಕ ನಿಧಿ(ಇನ್ಸೆಂಟಿವ್ ಅವಾರ್ಡ್) ಹಾಗೂ ಆರ್ಥಿಕ ನೆರವು ನೀಡುವ ಸಂಬAಧ ಅರ್ಜಿ ಆಹ್ವಾನಿಸಲಾಗಿದೆ.
೨೦೨೪-೨೫ನೇ ಸಾಲಿನ ಈ ಆರ್ಥಿಕ ನೆರವನ್ನು ಈ ಸಾಲಿನಲ್ಲಿ ನೀಡಲಾಗುತ್ತಿದೆ ಎಂದು ಕಾಫಿ ಬೋರ್ಡ್ ಪ್ರಕಟಣೆ ತಿಳಿಸಿದೆ.
ಶೈಕ್ಷಣಿಕ ಸ್ಟೆöÊಫಂಡ್ ಪ್ರತಿ ಕಾರ್ಮಿಕನ ಮಗುವಿಗೆ ಹಾಗೂ ಪ್ರೋತ್ಸಾಹಕ ನಿಧಿಯನ್ನು ರ್ಯಾಂಕ್ ಪಡೆಯುವ ಕಾರ್ಮಿಕನ ಮಗುವಿಗೆ ನೀಡಲಾಗುವುದು. ವೃತ್ತಿಪರ ಶಿಕ್ಷಣ ವ್ಯಾಸಂಗ ಮಾಡುವ ಕಾರ್ಮಿಕರ ಮಕ್ಕಳಿಗೆ ಆರ್ಥಿಕ ನೆರವನ್ನೂ ನೀಡುವುದಾಗಿ ಬೆಂಗಳೂರು ಕಾಫಿ ಬೋರ್ಡ್ನ ಆರ್ಥಿಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದು ಈ ಸಂಬAಧ ಕಾಫಿ ಬೋರ್ಡ್ನ ಮಡಿಕೇರಿ, ಗೋಣಿಕೊಪ್ಪಲು ಸೇರಿದಂತೆ ಇತರ ಮಂಡಳಿಗಳ ಉಪನಿರ್ದೇಶಕರಿಗೆ ಅರ್ಜಿಗಳನ್ನು ಸ್ವೀಕರಿಸುವಂತೆ ಸೂಚಿಸಿದ್ದಾರೆ. ಅರ್ಜಿಗಳನ್ನು ಪಡೆದು ಭರ್ತಿ ಮಾಡಲು ನ.೨೮ ಕೊನೆಯ ದಿನವಾಗಿದ್ದು, ಕಾಫಿ ಮಂಡಳಿಯ ಸಂಪರ್ಕಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಜಾತಿ ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ, ತೋಟದ ಮಾಲೀಕರ ದೃಢೀಕರಣ ಪತ್ರ ಮತ್ತು ಪಹಣಿ, ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರ ಹಾಗೂ ವಿದ್ಯಾರ್ಥಿಯ ಫೋಟೋವನ್ನು ಸಲ್ಲಿಸಬೇಕಿದೆ.
ಶೈಕ್ಷಣಿಕ ಸ್ಟೆöÊಫಂಡ್ ಪಡೆಯುವ ಅರ್ಹತೆ
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿ ಹೆಚ್ಚುವರಿ ಶಿಕ್ಷಣ ಪಡೆಯುವ ಮಕ್ಕಳಿಗೆ (ಮೊದಲನೆ ಪಿ.ಯು.ಸಿ) ಶೈಕ್ಷಣಿಕ ಸ್ಟೆöÊಫಂಡ್ ನೀಡಲಾಗುವುದು. ರೂ.೫,೦೦೦ ವಿದ್ಯಾರ್ಥಿವೇತನ ನೀಡಲಾಗುವುದು.
ಪ್ರೋತ್ಸಾಹಕ ನಿಧಿ(ಇನ್ಸೆಂಟಿವ್ ಅವಾರ್ಡ್)
ಕಳೆದ ಸಾಲಿನಲ್ಲಿ ಪ್ರತಿ ಕಾಫಿ ಮಂಡಳಿ ಪ್ರದೇಶದಲ್ಲಿ ಕಾಫಿ ಕಾರ್ಮಿಕರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿಯಲ್ಲಿ ಮೊದಲ ಸ್ಥಾನ ಪಡೆದಿರುವ ಹಾಗೂ ಶಿಕ್ಷಣವನ್ನು ಮುಂದುವರಿಸುತ್ತಿರುವ ಬಾಲಕ ಹಾಗೂ ಬಾಲಕಿಗೆ ಅನ್ವಯ. ರೂ.೨,೫೦೦ ನೀಡಲಾಗುವುದು.
ವೃತ್ತಿಪರ ಕೋರ್ಸ್ಗಳಿಗೆ ಆರ್ಥಿಕ ನೆರವು
ಕಳೆದ ಸಾಲಿನಲ್ಲಿ ಪಿ.ಯು.ಸಿ ಮುಗಿಸಿ ಪದವಿ, ಅಥವಾ ಪದವಿ ಮುಗಿಸಿ ಸ್ನಾತ್ತಕೋತ್ತರ ವ್ಯಾಸಂಗ ಮಾಡುತ್ತಿರುವವರಿಗೆ, ವೃತ್ತಿಪರ ಕೋರ್ಸ್ಗಳಾದ ವೈದ್ಯಕೀಯ, ಇಂಜಿನಿಯರಿAಗ್, ಕೃಷಿ, ಫಾರ್ಮಸಿ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡುತ್ತಿರುವವರಿಗೆ ಈ ನೆರವು ಅನ್ವಯವಾಗಲಿದೆ.
ಕಲೆ, ವಿಜ್ಞಾನ, ಕಾಮರ್ಸ್ ವಿಭಾಗದಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ರೂ. ೭,೫೦೦, ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವವರಿಗೆ ರೂ. ೧೫,೦೦೦ ಧನಸಹಾಯ ನೀಡಲಾಗುವುದು.
ವೃತ್ತಿಪರ ಶಿಕ್ಷಣಗಳಾದ ವೈದ್ಯಕೀಯ ವಿಜ್ಞಾನ, ಕೃಷಿ ಹಾಗೂ ಇದಕ್ಕೆ ಸಂಬAಧಿಸಿದ ಕೋರ್ಸ್ಗಳು, ಪಶುವೈದ್ಯಕೀಯ ಶಿಕ್ಷಣ, ಇಂಜಿನಿಯರಿAಗ್, ಫಾರ್ಮಸಿ, ನರ್ಸಿಂಗ್ ಹಾಗೂ ಇದಕ್ಕೆ ಸಂಬAಧಿಸಿದ ಶಿಕ್ಷಣದಲ್ಲಿ ಪದವಿ ಮಾಡುತ್ತಿರುವವರಿಗೆ ರೂ. ೨೦,೦೦೦ ಆರ್ಥಿಕ ನೆರವು ನೀಡಲಾಗುವುದು.
ಷರತ್ತುಗಳು
ಕಾರ್ಮಿಕರ ಮೊದಲೆರಡು ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಅದಾಗ್ಯೂ ಎರಡನೇ ಜನನ ಅವಳಿ, ತ್ರಿವಳಿ ಮಕ್ಕಳು ಹುಟ್ಟಿದಲ್ಲಿ ಇವರುಗಳಿಗೂ ಯೋಜನೆ ಅನ್ವಯವಾಗಲಿದೆ. ಮಕ್ಕಳು ಓದುತ್ತಿರುವ ಶೈಕ್ಷಣಿಕ ಸಂಸ್ಥೆಯನ್ನು ರಾಜ್ಯ, ಕೇಂದ್ರ ಸರಕಾರಗಳು ಗುರುತಿಸಿರಬೇಕು.