ಕೂಡಿಗೆ, ಅ. ೨೯: ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣ ಗೌಡ ಬಣದ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾಗಿರುವ ಕೂಡಿಗೆಯ ಕೆ.ಪಿ. ರಾಜು ಅವರಿಗೆ ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮತ್ತು ತಂಡದವರಿAದ ಕೂಡಿಗೆಯಲ್ಲಿ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಬಿ.ಎಸ್. ಲೋಕೇಶ್ ಸಾಗರ್, ಕನ್ನಡ ನಾಡಿನ ನೆಲ, ಜಲ ಸಂರಕ್ಷಣೆಗೆ ಇಂತಹ ಕನ್ನಡ ಪರ ಸಂಘಟನೆಗಳ ಅನಿವಾರ್ಯತೆ ಇದೆ. ಸಂಘಟನೆಯ ಮುಖೇನ ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆ ಮತ್ತು ಹೋರಾಟಗಳಲ್ಲಿ ತಮ್ಮ ತಂಡವನ್ನು ತೊಡಗಿಸಿಕೊಂಡು ಕನ್ನಡದ ಬೆಳವಣಿಗೆಗೆ ಕಾರ್ಯೋನ್ಮುಖರಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸಂದರ್ಭದಲ್ಲಿ ಹಾಜರಿದ್ದ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಸಂಘಟನಾ ಮನೋಭಾವದಿಂದ ಸಂಘಟಿತರಾಗಿ, ಯುವ ಸಮೂಹದೊಂದಿಗೆ ಜಿಲ್ಲೆಯ ಕನ್ನಡ ಪರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಉತ್ತಮ ತಂಡವಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು.
ಕನ್ನಡ ಸಿರಿ ಬಳಗ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಕೂಡಿಗೆ ಹನುಮ ಸೇನಾ ಸೇವಾ ಸಮಿತಿ ಕಾರ್ಯದರ್ಶಿ ರವಿ, ಖಚಾಂಚಿ ಧರ್ಮ, ರೈತ ಸಂಘದ ಅಧ್ಯಕ್ಷ ಕೆ.ಸಿ. ರಾಮಣ್ಣ, ಸತ್ಯನಾರಾಯಣ ವತ್ರ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಉದ್ಯಮಿ ಹನುಮರಾಜ್, ಸಮಿತಿಯ ಸದಸ್ಯರಾದ ಅರುಣ್ ಮಾದಪ್ಪ, ಸಂತೋಷ, ಮಂಜುನಾಥ, ಕೂಡಿಗೆ ಡೈರಿ ನಿವೃತ್ತ ಅಧಿಕಾರಿ ವಿಶ್ವನಾಥ, ರಾಮು ಸೇರಿದಂತೆ ಇತರರು ಇದ್ದರು.