ಮಡಿಕೇರಿ, ಅ. ೨೯: ಕಂದಾಯ ಹಾಗೂ ಉಪ ನೋಂದಾವಣಾಧಿಕಾರಿ ಕಚೇರಿಗಳ ಪೂರ್ವಭಾವಿ ವ್ಯವಸ್ಥೆಗಳನ್ನು ಕಲ್ಪಿಸುವ ಅಮ್ಮ ಎಂಟರ್‌ಪ್ರೆöÊಸಸ್ ಸಂಸ್ಥೆಯನ್ನು ಶಾಸಕ ಮಂತರ್ ಗೌಡ, ಸಿನಿಮಾ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ, ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್, ಮಂಞೆರ ಕುಟ್ಟಪ್ಪ ಇವರುಗಳ ಉಪಸ್ಥಿತಿಯಲ್ಲಿ ತಾ ೨೮ರಂದು ಉದ್ಘಾಟಿಸಲಾಯಿತು.

ಮಡಿಕೇರಿ ತಾಲೂಕು ಕಚೇರಿ ಎದುರು ಆರಂಭಗೊAಡಿರುವ ಈ ಸಂಸ್ಥೆ ಕೇವಲ ವಾಣಿಜ್ಯ ಉದ್ಯಮ ಆಗಿರದೆ ಬಡವರಿಗೆ ನೆರವಾಗುವ ಸಂಸ್ಥೆಯಾಗಿ ರೂಪುಗೊಳ್ಳಬೇಕೆಂದು ಅತಿಥಿಗಳು ಹಾರೈಸಿದರು. ಸಂಸ್ಥೆಯ ಮಾಲೀಕರುಗಳಾದ ಪವನ್ ದಂಪತಿ ಹಾಜರಿದ್ದರು.